ಗದಗ ನಲ್ಲಿ ಹಾಲಾಹಲ ನಗರಸಭೆ ಕೋಲಾಹಲ

ಗದಗ

ಆತ ಕಾಂಗ್ರೆಸ್ ಕಾರ್ಯಕರ್ತ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿ ಪಕ್ಷದ ಬಗ್ಗೆ ಪ್ರಚಾರ ಮಾಡ್ತಿದ್ದ. ತನ್ನ ಊರಿಗೆ ಬೇಕಾಗಿದ್ದ ವ್ಯಕ್ತಿ. ಆದ್ರೆ ಅವತ್ತು ಇದೇ ಕಾಂಗ್ರೆಸ್ ಮುಖಂಡ ಬರ್ಬರವಾಗಿ ಕೊಲೆಯಾಗಿದ್ದ(Murder). ಅವನನ್ನ ಕೊಂದ ಹಂತಕರು ಮರವೊಂದಕ್ಕೆ ನೇಣು ಹಾಕಿ ಹೋಗಿದ್ರು. ಇನ್ನೂ ಅದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರಿಗೆ ಅವನದ್ದೇ ಫೇಸ್‌ಬುಕ್ ಪೇಜ್ ಕೊಲೆಯ ಸುಳಿವು ಕೊಟ್ಟಿತ್ತು. ಕಾಂಗ್ರೆಸ್(Congress) ಸಾಮಾಜಿಕ ತಾಲತಾಣದ ಉಸ್ತುವಾರಿ ನೋಡ್ಕೊತಿದ್ದ ಶರಣಪ್ಪ ತನ್ನ ವೈಯಕ್ತಿಕ ವಿಷ್ಯಗಳನ್ನೂ ಫೇಸ್ ಬುಕ್‌ನಲ್ಲಿ(Facebook) ಹಾಕಿಕೊಳ್ತಿದ್ದ. ಹೀಗೆ ಅಪ್ಅಪ್ ಡೇಟ್ ಮಾಡ್ತಿದ್ದ ಶರಣಪ್ಪ ತನಗಾಗ್ತಿರೋ ಹಿಂಸೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ರು. ಅಲ್ಲಿಯ ಕೆಲ ಪೋಸ್ಟ್ ಗಳು ಕೇಸ್ ನ ತನಿಖೆಗೆ ಟ್ವಿಸ್ಟ್ ಕೊಟ್ಟಿದ್ದವು. ಜೀವ ಬೆದರಿಕೆ ಇದೆ ಅಂತಿದ್ದ ಶರಣಪ್ಪ(Sharanappa Sandigaudra) ಇವತ್ತು ಹೆಣವಾಗಿ ಹೋಗಿದ್ದಾನೆ. ಆದ್ರೆ ಹೆಂಡತಿನೇ ಕೊಲೆ ಮಾಡಿದ್ಲಾ..? ಅಥ್ವಾ ರಾಜಕೀಯ, ಇನ್ಯಾವುದೋ ಕಾರಣಕ್ಕೆ ಕೊಲೆ ನಡೆದಿದ್ಯಾ ಅನ್ನೋದು ಸಹಜವಾಗೇ ಎದ್ದಿರೋ ಪ್ರಶ್ನೆ.. ಎಲ್ಲ ಆ್ಯಂಗಲ್ ನಲ್ಲಿ ತನಿಖೆ ನಡೆಸ್ತಿರೋ ಪೊಲೀಸರು ಇನ್ನೂ ಯಾವುದೇ ಕನ್ಕ್ಲೂಷನ್ ಗೆ ಬಂದಿಲ್ಲ.. ಈ ಮಧ್ಯೆ ಗಂಡ ಹೆಂಡತಿ ಮಧ್ಯೆ ನಡೆದು ಎನ್ನಲಾದ ವಾಟ್ಸಾಪ್ ಚಾಟ್ ಲೀಕ್ ಆಗಿದ್ದು ಕೇಸ್ ಗೆ ದೊಡ್ಡ ತಿರುವು ಕೊಡುವ ಸಾಧ್ಯತೆಗಳಿವೆ. ಶರಣಪ್ಪನ ಕೊಲೆ ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸದ್ಯ ಆತನ ಹೆಂಡತಿಯ ಮೇಲೆಯೇ ಅನುಮಾನಿಸುತ್ತಿದ್ದಾರೆ. ಆಕೆ ಮತ್ತು ಶರಣಪ್ಪ ನಡುವಿನ ವಾಟ್ಸಪ್ ಚಾಟ್ ಅದಕ್ಕೆ ಸಾಕ್ಷಿಯಾಗಿದೆ. ಪ್ರೀತಿ ಮುದವೆಯಾದ ಶರಣಪ್ಪ ಮತ್ತು ಮಲ್ಲಮ್ಮ ಒಟ್ಟಿಗೆ ಬಾಳಿದ್ದು ಕೆಲವೇ ತಿಂಗಳುಗಳ ನಂತರ ಆದ್ರೆ ನಂತರ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲ್ಲೇರಿದರಾದ್ರೂ ಹೆಂಡತಿ ಮಾತ್ರತ್ರ ಗಂಡನ ರಕ್ತ ನೋಡಲು ಆತೋರೆಯುತ್ತಿದ್ದಳು.. ಈಗ ಅವಳೇ ಶರಣಪ್ಪನ ಕೊಲೆ ಮಾಡಿಸಿದ್ದಾಳ ಅನ್ನೋ ಪ್ರಶ್ನೆ ಎದ್ದಿದೆ.

Leave a Reply

Your email address will not be published. Required fields are marked *

error: Content is protected !!
× How can I help you?