ಧಾರವಾಡ (ಕ.ವಾ) ಮಾ.26: ನಿನ್ನೆ ಮಾರ್ಚ 25 ರ ರಾತ್ರಿ 11:34 ಗಂಟೆ ಸುಮಾರಿಗೆ ತೇಗೂರ ಚೆಕ್ ಪೋಸ್ಟ್ ದಲ್ಲಿ ಕೆಎಸ್ಆರ್ ಟಿ ಸಿ ಬಸ್ ತಪಾಸಣೆ ಮಾಡಿದಾಗ ದಾಖಲೆ ಇಲ್ಲದ ರೂ.4,97,600 ಗಳ ನಗದು ಹಣ ಪತ್ತೆ ಆಗಿದ್ದು, ಹಣ ವಶಕ್ಕೆ ಪಡೆದು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿಪ್ಪಾಣಿಯಿಂದ ಭದ್ರಾವತಿಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಕೆಎ-14, ಎಪ್- 0083 ಅನ್ನು ನಿಲ್ಲಿಸಿ, ತೇಗೂರ ಚೆಕ್ ಪೋಸ್ಟ್ ದಲ್ಲಿ ಎಸ್ಎಸ್ ಟಿ ಮತ್ತಿ ಎಫ್ಎಸ್ ಟಿ ತಙಡದ ಅಧಿಕಾರಿಗಳು ತಪಾಸಣೆ ಮಾಡಿದಾಗ ಚಿಕ್ಕಮಂಗಳೂರಿನ ಮಸೂದ್ ಎಂಬ ವ್ಯಕ್ತಿ ಬಳಿ ಸೂಕ್ತ ದಾಖಲೆಗಳಿಲ್ಲದ ರೂ.4,97,600 ಹಣ ಪತ್ತೆ ಆಗಿತ್ತು. ವಿಚಾರಣೆ ನಂತರ ಹಣವನ್ನು ವಶಕ್ಕೆ ಪಡೆದು ಜಿಲ್ಲಾ ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ.
ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವುತ ಮಾರ್ಗದರ್ಶನದಲ್ಲಿ ಎಸಿ ಶಾಲಂ ಹುಸೇನ್,ತಹಸಿಲ್ದಾರ ಡಾ.ಡಿ.ಎಚ್.ಹೂಗಾರ, ಎಂಸಿಸಿ ಅಧಿಕಾರಿ ಶಿವಪುತ್ರಪ್ಪ ಹೊಸಮನಿ, ಮ್ಯಾಜಿಸ್ಟ್ರೇಟ್ ಗಳಾದ ಪ್ರವೀಣ ಶಿಂಧೆ, ಮಂಜುನಾಥ ಹಿರೇಮಠ ಕ್ರಮವಹಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.