ಚಿಣ್ಣರ ಕಲಾ ಮೇಳ-2024ಬೇಸಿಗೆ ಶಿಬಿರ ಪ್ರಾರಂಭ.

ಧಾರವಾಡ 27 :
ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನಗರದ ಕಲಾ ಸಂಸ್ಥೆಯಾದ ರೈಜಿಂಗ್ ಸ್ಟಾರ್ ಆರ್ಟ ಆ್ಯಂಡ್ ಕಲ್ಬರಲ್ ಅಕ್ಯಾಡಮಿ ವತಿಯಿಂದ ಧಾರವಾಡನಗರದ ಸಾಯಿನಗರದ ಶ್ರೀ ಸಾಯಿಬಾಬಾ ದೇವಸ್ಥಾನದ ಹತ್ತಿರದಲ್ಲಿರುವ ಲೇಕ್ ಸಿಟಿ ಬಡಾವಣೆಯ ಆವರಣದಲ್ಲಿ ಬರುವ ಎಪ್ರೀಲ್ ತಿಂಗಳಿನ 7ನೇ ತಾರೀಖಿನಿಂದ 25 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶ ಮಲ್ಲಿಗವಾಡ ತಿಳಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಈ ಶಿಬಿರದಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಗೂ ಮನೋವಿಕಾಸಕ್ಕೆ ಪೂರಕವಾಗುವ ಕಲಾ ಚಟುವಟಿಕೆಗಳಾದ ಯೋಗ, ಸಂಗೀತ, ನೃತ್ಯ, ಅಭಿನಯ (ರಂಗಭೂಮಿ), ಜನಪದ, ಚಿತ್ರಕಲೆ, ಕರಕುಶಲ ಹಾಗೂ ವಿವಿಧ ವಿಷಯಗಳ ಕುರಿತು ನುರಿತ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.

ವಿಶೇಷವಾಗಿ ಜನಪದ ಕಲೆಗಳಾದ ಡೊಳ್ಳು, ವೀರಗಾಸೆ, ಸುಗ್ಗಿಯ ನೃತ್ಯಗಳೊಂದಿಗೆ ಸಂಪದ್ರಾಯ ಪದಗಳನ್ನು ಗ್ರಾಮೀಣ ಜನಪದ ಕಲಾವಿದರಿಂದ ಹೇಳಿಕೊಡಲಾಗುವುದು ಮತ್ತು ದೇಸಿ ಕ್ರೀಡೆಗಳಾದ ಲಗೋರಿ, ಕಬಡ್ಡಿ, ಬಗರಿ, ಚಿನ್ನಿದಾಂಡು ಜೊತೆಗೆ ಇನ್ನಿತರ ಕ್ರೀಡೆಗಳೊಂದಿಗೆ ಸಾಹಸ ತರಬೇತಿಯನ್ನು ಕೂಡಾ ನೀಡಲಾಗುವುದು. ಅಲ್ಲದೇ ಪ್ರತಿ ದಿನ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.

ಹಾರ್ಸ ರೈಡಿಂಗ್ (ಕುದುರೆ ಸವಾರಿ), ಮಡ್ಡಬಾಥ್, ರೇನ್ ಡ್ಯಾನ್ಸ್, ಏರ್ ಶೋ (ದ್ರೋಣ ಚಾಲನೆ) ಹಾಗೂ ಮ್ಯಾಜಿಕ್ ಶೋ ಕುರಿತು ವಿಶೇಷವಾಗಿ ಮಾರ್ಗದರ್ಶನ ವಿಶೇಷ ಆಕರ್ಷಣೆಯಾಗಲಿದೆ.

ಈ ಶಿಬಿರದ ಸಂದರ್ಭದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಕಲಾವಿದರೂ ಕೂಡಾ ಭೇಟಿ ನೀಡಲಿದ್ದಾರೆ. ಅಲ್ಲದೇ ಆರೋಗ್ಯ, ಪರಿಸರ ರಕ್ಷಣೆ, ಸ್ವಚ್ಛತೆ ಕುರಿತು ವಿವಿಧ ತಜ್ಞರೊಂದಿಗೆ ಅರಿವು ಮೂಡಿಸುವ ಪ್ರಾತಿಕ್ಷಿತೆಯನ್ನು ಏರ್ಪಡಿಸಲಾಗುವುದು.

ಅಂತಿಮವಾಗಿ ಶಿಬಿರದ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರವಾಸವಿದ್ದು, ನಂತರ ಎರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ನೃತ್ಯ, ಜಾನಪದ, ಗಾಯನ, ಸಂಗೀತ ಹಾಗೂ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗುವುದು.

ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದಿ 05 ಎಪ್ರಿಲ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರುತ್ತೇವೆ.

ಹೆಸರು ನೊಂದಾಯಿಸಲು ಸಂಪರ್ಕಿಸಿರಿ

ನಿರ್ದೆಶಕರು ಪ್ರಕಾಶ ಮಲ್ಲಿಗವಾಡ ಮೊ 7975075611 ಸಂಚಾಲಕರು ಸಂತೋಷ ಸಾಲಿಯಾನ ಮೊ 9738363790
ಸಂಚಾಲಕರು ಅಶ್ವತ ಮಲ್ಲಿಗವಾಡ ಮೊ 9066442054
ಪತ್ರಿಕಾಗೋಷ್ಟಿಯಲ್ಲಿ ಸಚಿನಕುಮಾರ ಪೂಜಾರಿ,ನಾಮದೇವ ಸದರೆ,ವೀರಭದ್ರ ನವಲಗುಂದ
ಇದ್ದರು.

Leave a Reply

Your email address will not be published. Required fields are marked *

error: Content is protected !!
× How can I help you?