ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ : ಚಿನ್ನ , ನಗದು ವಶ

 ಧಾರವಾಡ:--ನಗರದ ಅರಣ್ಯ ಇಲಾಖೆಯ ವಿಭಾಗೀಯ ಅರಣ್ಯ ಅಧಿಕಾರಿ ಮಹೇಶ ಹಿರೇಮಠ ಅವರ ಮನೆ ಮೇಲೆ ಲೋಕಾಯುಕ್ತರು ನಿನ್ನೆ ದಾಳಿ ನಡೆಸಿ , ಹಿರೇಮಠ ಅವರು ತಮ್ಮ ವೇತನಕ್ಕಿಂತ ಶೇ .100 ರಷ್ಟು ಹೆಚ್ಚಿಗೆ ಗಳಿಸಿದ್ದ ಅಕ್ರಮ ಚಿನ್ನಾಭರಣ , ನಗದು ಸೇರಿದಂತೆ ಇತ್ಯಾದಿ ಆಸ್ತಿಯ ಮಹತ್ವದ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಕುಮಾರೇಶ್ವರ ಬಡಾವಣೆಯ ಮೂಕಾಂಬಿಕಾ ನಗರದಲ್ಲಿರುವ ಆರ್‌ಎಫ್‌ಓ ಮಹೇಶ ಅವರ ಮನೆ ಮೇಲೆ ನಿನ್ನೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು . ಈ ಸಂದಭ೯ದಲ್ಲಿ 500 ಗ್ರಾಂ ಚಿನ್ನ , 3 ಲಕ್ಷ ನಗದು , ಒಂದೂವರೆ ಕೆಜಿ ಬೆಳ್ಳಿ , 5-6 ಸೈಟ್‌ಗಳ ಕಾಗದ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ . ಅಲ್ಲದೇ 27 ಎಕರೆ ಕೃಷಿ ಜಮೀನಿನ ಕಾಗದ ಪತ್ರಗಳನ್ನೂ ಲೋಕಾಯುಕ್ತರು ಪರಿಶೀಲನೆ ನಡೆಸಿದ್ದಾರೆ . ಹಿರೇಮಠ ಅವರು ತಮ್ಮ ವೇತನಕ್ಕಿಂತ ಶೇ 100 ರಷ್ಟು ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದು ಕಂಡು ಬಂದಿದ್ದು , ಅಕ್ರಮವಾಗಿ ಗಳಿಸಲಾಗಿದ್ದು , ಚಿನ್ನ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ಶಂಕರ ರಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!
× How can I help you?