ಧಾರವಾಡ :
ಕ್ರೈಸ್ತ ಧರ್ಮದ ಪವಿತ್ರ ಗ್ರಂಥಗಳ ಪ್ರಕಾರ ಗುಡ್ ಫ್ರೈಡೆ ಈ ದಿನದಂದು ಸ್ವಾಮಿ ಏಸುಕ್ರಿಸ್ತರನ್ನು ಶಿಲುಬೆಗೆ ಏರಿಸಿ ಮರಣ ದಂಡನೆಯನ್ನು ವಿಧಿಸುತ್ತಾರೆ. ಇಹಲೋಕದ ಎಲ್ಲಾ ಪಾಪಗಳಿಗೋಸ್ಕರ ತಾವು ಶಿಲುಬೆಯಲ್ಲಿ ಮರಣ ದಂಡನೆಯನ್ನು ಹೊತ್ತು ತಮ್ಮ ಪ್ರಾಣವನ್ನೇ ತ್ಯಜಿಸುತ್ತಾರೆ. ಇದೇ ರೀತಿ ಮೂರನೇ ದಿನ ಮತ್ತು ಅವರು ಪುನರ್ಜೀವಂತರಾಗಿ ತಮ್ಮ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಾರೆ ಈ ದಿನವನ್ನು ಕ್ರೈಸ್ತ ಧರ್ಮದವರು ಈಸ್ಟರ್ ಹಬ್ಬ ಎಂದು ಆಚರಿಸುತ್ತಾರೆ
ಈ ಮೂರು ದಿನಗಳಲ್ಲಿ ಯೇಸುವಿನ ಮರಣ ದುಃಖಕರವಾಗಿದ್ದು ಮತ್ತು ಪುನರುತ್ಥಾನ. ಕ್ರೈಸ್ತರಿಗೆ ಒಂದು ಮುಖ್ಯವಾದ ಹಬ್ಬವಾಗಿದೆ .
ಈ ಹಬ್ಬವನ್ನು ಧಾರವಾಡದ ನಿತ್ಯ ಸಹಾಯ ಮಾತೆಯ ದೇವಾಲಯದಲ್ಲಿ ಇಲ್ಲಿನ ಮುಖ್ಯ ಗುರುಗಳು ಹಾಗೂ ಹಿರಿಯರು ಕ್ರೈಸ್ತ ಸಮಾಜದ ಎಲ್ಲಾ ಬಂದು ಭಗಿನಿಯರ ಉಪಸ್ಥಿತಿಯಲ್ಲಿ ಈಸ್ಟರ್ ಹಬ್ಬವನ್ನು ಕೈಗಳಲ್ಲಿ ಮೇಳದ ಬತ್ತಿ ಗಳನ್ನು ಹಿಡಿದು ಶನಿವಾರ ಸಂಜೆ ಆಚರಿಸಲಾಯಿತು