ಧಾರವಾಡ :
ಮಹಾನಗರದ ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ ಯು 3024 ರ ಹೊಸ ವರ್ಷದಿಂದ ರಂಗ ದಿಗ್ಗಜರ ಸವಿ ನೆನಪಿನಲ್ಲಿ, ರಂಗಭೂಮಿಯ ಸಾಂಸ್ಕೃತಿಕ ಅರಿವು ಮೂಡಿಸಲು ಪ್ರತಿ ತಿಂಗಳು ಸಂಸ್ಕೃತಿ ಪ್ರಿಯರ ದತ್ತಿನಿಧಿ ಕೊಡುಗೆಯ ಮೂಲಕ, “ಮಾಸಿಕ ಉಪನ್ಯಾಸ”ಗಳನ್ನು ಮನೋಹರ ಗ್ರಂಥ ಮಾಲೆಯ ಸಹಯೋಗದಲ್ಲಿ ಏರ್ಪಡಿಸುತ್ತಿದೆ.
ಈ ವರ್ಷದ ನಾಲ್ಕನೆಯ ಕೊಡುಗೆಯಾಗಿ, ಶನಿವಾರ ಏಪ್ರಿಲ್ 6 ರಂದು ಗ್ರಂಥ ಮಾಲೆಯ ಅಟ್ಟದಲ್ಲಿ ಸಂಜೆ 5:30 ಗಂಟೆಗೆ ಧಾರವಾಡದ ಹಿರಿಯ ಸಾಹಿತಿ ದಿ. ದ ಬಾ ಕುಲಕರಣಿ ಇವರ ಸ್ಮರಣಾರ್ಥ ಅವರ ಕುಟುಂಬಸ್ಥರು ನೀಡಿದ ದತ್ತಿಯ ಅಂಗವಾಗಿ ನಗರದ ಹಿರಿಯ ಸಾಹಿತಿ ಹಾಗೂ ಮಾಜಿ ಅಧ್ಯಕ್ಷರಾದ ಡಾ. ಶಾಮ್ ಸುಂದರ್ ಬೀದರಕುಂದಿ ಯವರು “ದಬಾ ಕುಲಕರ್ಣಿ ಅವರ ಕಥಾ ಸಾಹಿತ್ಯ” ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧಾರವಾಡದ ಸಾಹಿತ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಿರಿಯರ ಸಾಹಿತ್ಯದ ರಸದೂಟವನ್ನು ಸವಿಯಬೇಕೆಂದು ಸಂಚಾಲಕ ಸಮೀರ್ ಜೋಶಿ ಅವರು ವಿನಂತಿಸುತ್ತಾರೆ.