ಸವದತ್ತಿ.
ಲೋಕಸಭಾ ಚುನಾವಣೆಯ ಅಂಗವಾಗಿ ಬೆಳಗಾವಿ ಲೋಕಸಭಾ ಕ್ಷೆತ್ರದ ಸವದತ್ತಿಯಲ್ಲಿ ಬಿ ಜೆ ಪಿ ಮಾಜಿ ಶಾಸಕರಾದ ದಿವಂಗತ ಶ್ರೀ ಆನಂದ ಮಾಮನಿಯವರ ಪತ್ನಿಯವರಾದ ಶ್ರೀಮತಿ ರತ್ನಾ ಆನಂದ ಮಾಮನಿಅವರ ಮನೆಯಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿ ಬರುವ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದೇ, ಬೆಳಗಾವಿಯ ಲೋಕಸಭಾ ಕ್ಷೆತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಾದ ಶ್ರೀಜಗದೀಶ್ ಶೆಟ್ಟರ್ ಅವರ ಪರವಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಭಾರತೀಯ ಜನತಾ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಶ್ರಮಿಸಲು ಕೋರಲಾಯಿತು.
ಈ ಸಂದರ್ಭದಲ್ಲಿ ಬಿ ಜೆ ಪಿ ಮುಖಂಡರಾದ ಶ್ರೀ ವೀರಪಾಕ್ಷಪ್ಪ ಮಾಮನಿ, ಶ್ರೀ ಸುನೀಲ್ ಮಾಮನಿ, ಜೆ ಡಿ ಎಸ್ ಮುಖಂಡರಾದ ಶ್ರೀ ಸೌರಭ್ ಆನಂದ ಚೋಪ್ರಾ ಶ್ರೀ ಜಗದೀಶ್ ಕೌಜಗೇರಿ, ಶ್ರೀ ನವೀನ್ ಸೋಮಣ್ಣವರ, ಶ್ರೀ ಮಹೇಶ ದ್ಯಾವಪ್ಪನವರ, ಶ್ರೀ ಹರ್ಷ ಪಾಟೀಲ್, ಶ್ರೀ ಸೋಮನಗೌಡ ಪಾಟೀಲ್ ಹಾಗೂ ಸವದತ್ತಿ ಪುರಸಭೆಯ ಸದಸ್ಯರು, ಹಾಗೂ ನಾಯಕರು ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.