ಅಂತೂ ಇಂತು ಬೆಳಕಿಗೆ ಬಂದ ಸತ್ಯಾಸತ್ಯತೆ

ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಆರೋಪದಡಿ ಜೈಲು ಸೇರಿದ್ದ ಫಯಾಜ್ ಮೊಬೈಲ್ ಫೋನ್‌ನಲ್ಲಿದ್ದ ಕೆಲ ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟಿದ್ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕೆಲ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಆರೋಪಿ ಫಯಾಜ್ ಬಂಧನವಾಗುತ್ತಿದ್ದಂತೆ ಆತನ ಸ್ನೇಹಿತರಾದ ಧಾರವಾಡ ಮೂಲದ ಸಾಧಿಕ್ ಇಮಾಮಸಾಬ್ ತಡಕೋಡ ಹಾಗೂ ಆದಿಲ್ ಎಂಬ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ನೇಹಾ-ಫಯಾಜ್, ಜಸ್ಟಿಸ್ ಫಾರ್ ಲವ್’ ಎಂಬ ಅಭಿಯಾನ ಆರಂಭಿಸಿದ್ದರು. ನೇಹಾ ಹಾಗೂ ಸಾಧಿಕ್ ಫೇಸ್ಬುಕ್, ಇನ್ಸ್ಟಾ ಖಾತೆಯಿಂದ ಹಳೆಯ ಫೋಟೋಗಳನ್ನು ಬಳಸಿಕೊಂಡು ಅವುಗಳನ್ನು ಪೋಸ್ಟ್ ಮಾಡಿದ್ದರು. ಕೇವಲ ಫೋಟೋಗಳನ್ನು ವೈರಲ್ ಮಾಡಿದ್ದರೆ ಬಹುಶಃ ತೊಂದರೆ ಇರುತ್ತಿರಲಿಲ್ಲ. ಆದರೆ, ವೈರಲ್ ಆದ ನೇಹಾ ಮತ್ತು ಫಯಾಜ್ ಖಾಸಗಿ ಫೋಟೋಗಳ ಮೇಲೆ ಕೋಮು ಪ್ರಚೋದಿತ ಶಬ್ದ ಪ್ರಯೋಗ, ಇವರಿಬ್ಬರ ಸ್ನೇಹ, ಪ್ರೀತಿಯ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಬರೆದು ಹರಿಬಿಟ್ಟಿದ್ದೇ ಸದ್ಯ ಮುಳುವಾಗಿದೆ. ಪೊಲೀಸರ ಅತಿಥಿಯಾಗಿರುವ ಫಯಾಜ್ ಕಾರಾಗೃಹದಲ್ಲಿದ್ದುಕೊಂಡೇ ತನ್ನ ಮೊಬೈಲ್ ಮೂಲಕ ಇಂತಹ ಕೃತ್ಯ ಮಾಡಿರಬಹುದು ಎಂದು ಆರಂಭಿಕ ಹಂತದಲ್ಲಿ ಶಂಕೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ನೇಹಾ-ಫಯಾಜ್ ಫೋಟೋಗಳು ಅತಿಯಾಗಿ ಹರಿದಾಡಲು ಆರಂಭಿಸಿದಾಗ ನೇಹಾ ತಾಯಿ ಗೀತಾ ಹಿರೇಮಠಫಯಾಜ್-ನೇಹಾ೨೪’, ಫಯಾಜ್. ನೇಹಾ ೨೦೨೪’ ಹಾಗೂಫಯಾಜ್‌ನೇಹಾ_೨೦೨೪’ ಇನ್ಸ್ಟಾ, ಫೇಸ್ಬುಕ್ ಖಾತೆಗಳ ಮೇಲೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಈ ಖಾತೆಗಳನ್ನು ತೆರೆದು, ಅದರಿಂದ ನೇಹಾ-ಫಯಾಜ್ ಫೋಟೋಗಳನ್ನು ವೈರಲ್ ಮಾಡುತ್ತಿದ್ದವರ ಹೆಡೆಮುರಿಕಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಫೋಟೋ ಹರಿಬಿಟ್ಟ ಆರೋಪದಡಿ ಸಾಧಿಕ್ ಇಮಾಮಸಾಬ್ ತಡಕೋಡ ಹಾಗೂ ಆದಿಲ್ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಮುದ್ದೆ ಮುರಿಯುತ್ತಿದ್ದಾರೆ.

ಪೊಲೀಸರಿಗೊಪ್ಪಿಸಿದ ಯುವಕರು
ತನ್ನ ಪ್ರೀತಿಗಾಗಿ ಫಯಾಜ್ ನೇಹಾ ಕೊಲೆ ಮಾಡಿದ್ದಾನೆ. ಅದನ್ನು ಲವ್ ಜಿಹಾದ್ ಅನ್ನಬೇಡಿ. ಇತ್ತೀಚೆಗೆ ರುಕ್ಸಾನಾ ಎಂಬ ಯುವತಿಗೆ ಅನ್ಯಾಯವಾಗಿದೆ. ಅದು ಭಗವಾ ಜಿಹಾದಾ’ ಎಂದು ಪ್ರಶ್ನಿಸಿ ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಅವರಿಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ.ನಮ್ಮ ಮನಸ್ಸು ನಾವು ಇಟ್ಟುಕೊಳ್ಳುತ್ತೇವೆ. ನೀವೇನು ಮಾಡುತ್ತೀರಿ’ ಎಂದು ಮರು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಯುವಕರನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!
× How can I help you?