ರಥೋತ್ಸವ ವೇಳೆ ಗಾಲಿಗೆ ಸಿಲುಕಿ ಇಬ್ಬರು ಭಕ್ತರ ಸಾವು, ಓರ್ವನಿಗೆ ಗಾಯ.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಘಟನೆ.
ರೋಣ ಪಟ್ಟಣದ ವೀರಭದ್ರೇಶ್ವರ ರಥೋತ್ಸವ ವೇಳೆ ನಡೆದ ದುರ್ಘಟನೆ.
ಮೃತ ಭಕ್ತರು ರೋಣ ಮೂಲದ ನಿವಾಸಿಗಳು.
ಮಲ್ಲಪ್ಪ ಲಿಂಗನಗೌಡ್ರ (55) ಮೃತ ದುರ್ದೈವಿ.
ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ.
ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಗುರುತು ಸಿಗದಂತಾದ ವ್ಯಕ್ತಿ.
ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿದ ಇಬ್ಬರು ಭಕ್ತರು.
ಸೇರಿದ ಭಕ್ತ ಸಮೂಹ ಚದುರಿಸಲು ಪೊಲೀಸರು ಹರಸಾಹಸ.
ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ : M H Nadaf