ಗದಗ ಜಿಲ್ಲೆಯ ಶಿಕ್ಷಕರ ಗುಣಮಟ್ಟ ಪರಿಶೀಲನೆಗೆ ನ್ಯಾಯಾಲಯದ ಮೊರೆ ಹೋಗಲು ರಾ ದೇ ಕಾರಭಾರಿ ನಿರ್ಧಾರ

ರಾಜ್ಯಾದ್ಯಂತ ಶಿಕ್ಷಣ ಮಟ್ಟ ಕುಸಿಯುತ್ತಿರುವ ಇವತ್ತಿನ ದಿನಮಾನವನ್ನು ಅವಲೋಕನ ಮಾಡಿದರೆ ಮೊದಲನೆಯದಾಗಿ ಸರಕಾರ ಹೊರಡಿಸಿದ ಅವೈಜ್ಞಾನಿಕ ನಿಯಮಗಳು ಒಂದು ಬದಿಯಾದರೆ ನೀತಿಗೆಟ್ಟ ಶಿಕ್ಷಣ ಇಲಾಖೆಯ ದಿನವೇಣಿಸಿ ಸಂಬಳ ಪಡೆಯುವ ಹಕೀಕತ್ತು ಒಂದು ಕಡೆ.
ಮತ್ತೊಂದು ಬದಿಯಿಂದ ಯೋಚಿಸುವುದಾದರೆ ಲಂಚ ಕೊಟ್ಟು ನೇಮಕಾತಿ ಗೊಂಡಂತಹ ಶಿಕ್ಷಕರ ದಂಡು ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಸರಿಯಾಗಿ ಒಂದಕ್ಷರ ಸಹ ಬರದಂತಹ ಶಿಕ್ಷಕರು ನಮ್ಮ ಸುತ್ತ ಇರುವುದು ನಮ್ಮ ವಿದ್ಯಾರ್ಥಿಗಳ ದುರ್ದೈವ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಕಮಿಷನ್ ಪಡೆಯುತ್ತಾ ದಿನ ಕಳೆಯುತ್ತಿದೆ.
ಸರಕಾರಿ ಶಾಲೆಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದರೆ ಸ್ಥಳೀಯ ಸಂಸ್ಥೆಗಳ ಅಧೀನ ಶಾಲೆಗಳು ಸ್ಥಳಿತ ಸಂಸ್ಥೆಯ ರಾಜಕೀಯ ನಾಯಕರ ಮತ್ತು ಬ್ರಷ್ಟ ಅಧಿಕಾರಿಗಳ ಕೆಪಿಮುಷ್ಟಿಗೆ ಸಿಕ್ಕಿ ಒದ್ದಾಡುತ್ತಿವೆ ಇಲ್ಲಿ ಕಲಿಯುತ್ತಿರುವ ಮಕ್ಕಳ ಗತಿ ದೇವರೇ ಬಲ್ಲ.
ಇನ್ನೂ ಕೆಲವು ಖಾಸಗಿ ಶಾಲೆಗಳು ಕೇವಲ ಸರಕಾರಿ ಕಾಗದಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದರೆ ಇನ್ನೂ ಹಲವು ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದತ್ತು ಪಡೆದಂತೆ ನಡೆದುಕೊಳ್ಳುತ್ತವೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಖಾಸಗಿ ಶಾಲೆಗಳ ಜೊತೆ ಗುಲಾಮಗಿರಿತನವನ್ನು ಚಾಚೂ ತಪ್ಪದೆ ನೆರವೇರಿಸುತ್ತಿದೆ.
ಲಂಚ ನೀಡುವ ಮೂಲಕ ನೇಮಕಾತಿ ಪಡೆದುಕೊಂಡ ಶಿಕ್ಷಕರು ಅದು ಹೇಗೆ ತಾನೇ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ.
ನಗರಸಭೆಯ ಅಧೀನದಲ್ಲಿರುವ ಗದಗ ನಗರಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾಲೇಜು ಭಾಗದಲ್ಲಿ ಪೀ ಟೀಚರ್ ಒಬ್ಬರನ್ನು 40 ಲಕ್ಷ ಲಂಚ ಪಡೆಯುವ ಮೂಲಕ ನೇಮಕ ಮಾಡಲಾಗಿದೆ ಸದರಿ ನೇಮಕಾತಿಯನ್ನು ಅನುಮೋದಿಸಲು ಲಂಚಬಡುಕ ತಂಡ ಬೆಂಗಳೂರು ಪಿಯೂ ಬೋರ್ಡ್ ಗೆ ಅಲೆದಾಡುತ್ತಿದೆ ಇದನ್ನು ರದ್ದು ಪಡಿಸಲು ನಮ್ಮ ಸಮೂಹ ದೂರನ್ನು ಸಲ್ಲಿಸಿದೆ.
ರಾಜ್ಯಾದ್ಯಂತ ಶಿಕ್ಷಣ ವ್ಯವಸ್ಥೆ ಇಂತಹ ನಕಲಿ ಶಿಕ್ಷಕರ ಮತ್ತು ಲಂಚಬಡುಕ ಇಲಾಖೆಯ ಕಪಿಮುಷ್ಟಿಗೆ ಸಿಲುಕಿ ಮಕ್ಕಳ ಭವಿಷ್ಯ ಹಾಳಾಗುತ್ತಿದ್ದು ಇಂತಹ ನಕಲಿ ಶಿಕ್ಷಕರನ್ನು ಗದಗ ಜಿಲ್ಲೆಯಿಂದ ಓಡಿಸುವುದು ಅನಿವಾರ್ಯ.

ರಾಜ್ಯಾದ್ಯಂತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಾಗೂ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದರೆ ಅದರ ಕೇವಲ ಹಿಂಹರಹ ನೀಡಲು ತಿಂಗಳಾನುಗಟ್ಟಲೆ ಸಮಯ ಪಡೆಯುತ್ತದೆ ಅಷ್ಟೇ ಅಲ್ಲ ಕೆಲವೊಂದು ಶಿಕ್ಷಣ ಸಂಸ್ಥೆಗಳ ದುರಾಡಳಿತದ ಸಾಕ್ಷಿ ಸಮೇತ ದೂರು ಸಲ್ಲಿಸಿದರೂ ಸರಕಾರಿ ಸಂಸ್ಥೆಗಳು ಸಂಸ್ಥೆಗಳಿಂದ ಲಂಚ ಪಡೆದು ಪ್ರಕರಣ ಮುಚ್ಚಿ ಹಾಕಿವೆ
ವಸತಿ ಶಾಲೆಯೊಂದರಲ್ಲಿ ಮಕ್ಕಳಿಗೆ ಸೂಜಿ ಚುಚ್ಚಿ ಚಿತ್ರಹಿಂಸೆ ನೀಡುತ್ತಿರುವ ದೂರಿಗೆ ಸಂಬಂಧ ಪಟ್ಟಂತೆ ಸಮಾಜ ಕಲ್ಯಾಣ ಇಲಾಖೆ ಕೇವಲ ದೂರಿನ ಪಾತ್ರಕ್ಕೆ ಇದು ನಮ್ಮ ವ್ಯಾಪ್ತಿಗೆ ಸಂಬಂಧ ಪಟ್ಟಿಲ್ಲ ಎಂದು ಹೇಳಿ ಬೇರೆ ಇಲಾಖೆಗೆ ಪತ್ರ ಹಸ್ತಾಂತರ ಮಾಡಲು ಮೂರು ತಿಂಗಳು ಪಡೆದಿದೆ ಅಂದರೆ ಇಂತಹ ಸ್ಥಿತಿಯಲ್ಲಿ ಸಂಕಷ್ಟದಲ್ಲಿ ಇದ್ದ ಮಕ್ಕಳ ಹೆಣ ಬಿದ್ದ ಮೇಲೆ ಸರಕಾರ ಎಚ್ಚರವಾಗುತ್ತದಾ..
ರಾಜ್ಯದ ವಿಷಯ ಬೇರೆ ಅದರ ಬಗ್ಗೆ ಮತ್ತೊಮ್ಮೆ ಮತ್ತೊಂದು ಪ್ರಕರಣ ನಡೆಸಬಹುದು.
ಸದ್ಯ ಗದಗ ಜಿಲ್ಲೆಯ ಶೈಕ್ಷಣಿಕ ಅವ್ಯವಸ್ಥೆಯ ಬಗ್ಗೆ ಮಾನ್ಯ ನ್ಯಾಯಾಲಯದ ಮೊರೆ ಹೋಗಲು ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಿದ್ಧತೆ ನಡೆಸಿದೆ.
ಗದಗ ಜಿಲ್ಲೆಯ ಉತ್ತಮ ಶಿಕ್ಷಣ ವ್ಯವಸ್ಥೆ ಕಾಪಾಡಲು ಹಾಗೂ ಲಂಚ ಬಡುಕ ಅಧಿಕಾರಿಗಳನ್ನು ದಡ್ಡ ಶಿಕ್ಷಕರನ್ನು ಲಂಚ ನೀಡಿ ನೇಮಕಗೊಂಡ ಶಿಕ್ಷಕರನ್ನು ಕಿತ್ತು ಬಿಸಾಕಬೇಕಿದೆ.

Leave a Reply

Your email address will not be published. Required fields are marked *

error: Content is protected !!
× How can I help you?