ವರದಿ : ರಾಹುಲ್ ಕ್ರಾಂತಿಕಾರಿ
ಸೈಬರ್ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ
ಇಂದಿನ ದಿನಗಳಲ್ಲಿ ಸೈಬರ್ ಸುರಕ್ಷತೆಯ ಜಾಗೃತಿ ಅತ್ಯವಶ್ಯಕವಾಗಿದೆ. ಬೀದರ್ ನಗರದಲ್ಲಿ ಇರುವ ಬೀದರ್ ಹೈ ಟೇಕ್ ಟ್ಯುಟೋರಿಯಲ್ ತರಬೇತಿ ಕೇಂದ್ರದಲ್ಲಿ ಸೈಬರ್ ಸುರಕ್ಷತೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೀದರ್ ಹೈ ಟೇಕ್ ಟ್ಯುಟೋರಿಯಲ್ನ ತರಬೇತಿ ಕೇಂದ್ರದ ಅಧ್ಯಕ್ಷ ಶ್ರೀ ಸಂಜೀವ್ ಕುಮಾರ್ ಅವರು ಸೈಬರ್ ಸುರಕ್ಷತೆಯ ಅಗತ್ಯವನ್ನು ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ನಗರದಲ್ಲಿ ಇರುವ ಬಸವೇಶ್ವರ ಕಾಲೋನಿಯ ಹೈ ಟೇಕ್ ಟ್ಯುಟೋರಿಯಲ್ ತರಬೇತಿ ಕೇಂದ್ರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಮೊಬೈಲ್ ಬಳಸುವಾಗ ಎಚ್ಚರಿಕೆಯನ್ನು ವಹಿಸಬೇಕು ಮತ್ತು ಪರಿಚಯ ಇಲ್ಲದವರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ, ಆದರೆ ಮೊಬೈಲ್ ಬಳಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಮಕ್ಕಳು ಆಟ ಆಡುವ ಆ್ಯಪ್‌ಗಳನ್ನು ಬಳಸುವ ಮೂಲಕ ಮೋಸ ಹೋಗುತ್ತಿರುವುದನ್ನು ನಾವು ತಡೆಯಬೇಕು. ಆದುದರಿಂದ ಯಾವುದೇ ಲಿಂಕ್, ಓಟಿಪಿ ಅಥವಾ ನಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಆ್ಯಪ್‌ಗಳಲ್ಲಿ ಹಾಕಬಾರದು,” ಎಂದು ಅವರು ತಿಳಿ ಹೇಳಿದರು.
ಕಾರ್ಯಕ್ರಮವನ್ನು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜೀಸ್‌ನ ಅಸಿಸ್ಟೆಂಟ್ ಮ್ಯಾನೇಜರ್ ದಯಾನಂದ ಹಿರೇಮಠ ಅವರು ಉದ್ಘಾಟಿಸಿ, ಸೈಬರ್ ಸುರಕ್ಷತೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರೀಕ್ಷೆ ಬರೆದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ವಿತರಿಸಿದರು.
ಸ್ವಪ್ನ ತರಬೇತಿ ಕೇಂದ್ರದ ಮುಖ್ಯಸ್ಥೆ ಶ್ರೀ ಸಂಜೀವ್ ಕುಮಾರ್ ಸೈಬರ್ ಚಾಂಪಿಯನ್ ಎಂದು ಪರಿಚಿತರಾದ ಕುಮಾರಿ ಅರ್ಚನಾ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾರ್ಥನೆಯನ್ನು ಕುಮಾರಿ ಸಾಯಿ ಭವಾನಿ ಹಾಗೂ ನಿರೂಪಣೆಯನ್ನು ಕುಮಾರಿ ತೇಜಸ್ವಿನಿ ಅವರು ನೆರವೇರಿಸಿದರು.
ಈ ಕಾರ್ಯಕ್ರಮವನ್ನು ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ಡೆಲ್ ಟೆಕ್ನಾಲಜೀಸ್, ಮತ್ತು ಹೈ ಟೇಕ್ ಟ್ಯುಟೋರಿಯಲ್ ತರಬೇತಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.