ಲೋಕಸಭಾ ಚುನಾವಣೆ ಪಿ ಮಾರ್ಕ್‌ Exit Poll : ಕರ್ನಾಟಕದ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಸಂಪೂರ್ಣ ಪಟ್ಟಿ!


ಕರ್ನಾಟಕದ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಸಂಪೂರ್ಣ ಪಟ್ಟಿ!
Karnataka Lok Sabha Elections 2024 : ಲೋಕಸಭಾ ಚುನಾವಣೆ ಮುಗಿದಿದ್ದು, ಈಗ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು, ಮೋದಿಗೆ ಮತ್ತೊಮ್ಮೆ ಅಧಿಕಾರ ಎಂದು ಭವಿಷ್ಯ ನುಡಿದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳ ಹೊರತಾಗಿಯೂ ಬಿಜೆಪಿ ಹಾಗೂ ಜೆಡಿಎಸ್‌ ಉತ್ತಮ ಸಾಧನೆ ಮಾಡಲಿವೆ ಎಂದು ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿದ್ದು, ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಎಂದು ಕ್ಷೇತ್ರವಾರು ಸಮೀಕ್ಷೆಯನ್ನು ಕೂಡ ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ.

ಹೈಲೈಟ್ಸ್‌:
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರು
ಕರ್ನಾಟಕದ ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಬೆಂಗಳೂರು : ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ ಆಗಿದ್ದು, ಫಲಿತಾಂಶಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ. ಈಗಾಗಲೇ ಎಕ್ಸಿಟ್‌ ಪೋಲ್‌ಗಳು ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತವನ್ನು ನೀಡಿವೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್‌ ಪೋಲ್‌ಗಳು ಹೇಳಿವೆ. ಆದರೆ, ಬಿಜೆಪಿ ತನ್ನ ಕ್ಲೀನ್‌ ಸ್ವೀಪ್‌ ಗುರಿಯನ್ನು ತಲುಪುವುದಿಲ್ಲ ಎಂದಿರುವ ಎಕ್ಸಿಟ್‌ ಪೋಲ್‌ಗಳು, ಕಾಂಗ್ರೆಸ್‌ಗೂ ಕೂಡ ಶಾಕ್‌ ನೀಡಿವೆ.

ಪ್ರಮುಖವಾಗಿ ಪಿ ಮಾರ್ಕ್‌ ಸಂಸ್ಥೆಯು ಕ್ಷೇತ್ರವಾರು ಸಂಭಾವ್ಯ ಫಲಿತಾಂಶವನ್ನು ನೀಡಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಮುನ್ಸೂಚನೆ ನೀಡಿದ್ದರೆ, ಜೆಡಿಎಸ್‌ ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲೂ ಜಯ ಗಳಿಸುತ್ತದೆ ಎಂದು ಪಿ ಮಾರ್ಕ್‌ ಭವಿಷ್ಯ ನುಡಿದಿದೆ. ಕರ್ನಾಟಕದಲ್ಲಿರುವ ಆಡಳಿತಾರೂಢ ಕಾಂಗ್ರೆಸ್‌ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ ಎಂದು ಪಿ ಮಾರ್ಕ್‌ ಅಂದಾಜಿಸಿದೆ.

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಕಾಂಗ್ರೆಸ್‌ ಏಕಾಂಗಿಯಾಗಿ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಿತ್ತು. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದವು. ಇತ್ತ ಕಾಂಗ್ರೆಸ್‌ 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್‌ ಇಟ್ಟುಕೊಂಡಿತ್ತು. ಆದರೆ, ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ ಎರಡು ಕಡೆಯವರು ತಮ್ಮ ಗುರಿಗಳನ್ನು ತಲುಪಲ್ಲ ಎಂದು ಹೇಳಿದೆ.

ಪಿ ಮಾರ್ಕ್‌ ಸಮೀಕ್ಷೆಯ ಕ್ಷೇತ್ರವಾರು ಫಲಿತಾಂಶವನ್ನು ನೋಡಿದರೆ, ಈ ಕೆಳಗಿನ ಅಭ್ಯರ್ಥಿಗಳು ಗೆಲ್ಲಬಹುದು ಎನ್ನಲಾಗಿದೆ. 28 ಕ್ಷೇತ್ರಗಳ ಸಂಭಾವ್ಯ ವಿಜೇತರ ಪಟ್ಟಿ ಇಲ್ಲಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಚಿಕ್ಕೋಡಿ – ಅಣ್ಣಾ ಸಾಹೇಬ್‌ ಜೊಲ್ಲೆ – ಬಿಜೆಪಿ
ಬೆಳಗಾವಿ – ಜಗದೀಶ್‌ ಶೆಟ್ಟರ್‌ – ಬಿಜೆಪಿ
ಬಾಗಲಕೋಟೆ – ಪಿಸಿ ಗದ್ದಿಗೌಡರ್‌ – ಬಿಜೆಪಿ
ವಿಜಯಪುರ – ರಮೇಶ್‌ ಜಿಗಜಿಣಗಿ – ಬಿಜೆಪಿ
ಕಲಬುರಗಿ – ರಾಧಾಕೃಷ್ಣ ದೊಡ್ಮನಿ – ಕಾಂಗ್ರೆಸ್‌
ರಾಯಚೂರು – ರಾಜಾ ಅಮರೇಶ್ವರ ನಾಯಕ – ಬಿಜೆಪಿ
ಬೀದರ್‌ – ಸಾಗರ್‌ ಖಂಡ್ರೆ – ಕಾಂಗ್ರೆಸ್‌
ಕೊಪ್ಪಳ – ಡಾ ಬಸವರಾಜ ಕ್ಯಾವಟೂರು – ಬಿಜೆಪಿ
ಬಳ್ಳಾರಿ – ಬಿ ಶ್ರೀರಾಮುಲು – ಬಿಜೆಪಿ
ಹಾವೇರಿ – ಬಸವರಾಜ ಬೊಮ್ಮಾಯಿ – ಬಿಜೆಪಿ
ಧಾರವಾಡ – ಪ್ರಹ್ಲಾದ್‌ ಜೋಶಿ – ಬಿಜೆಪಿ
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ – ಬಿಜೆಪಿ
ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್‌ – ಬಿಜೆಪಿ
ಶಿವಮೊಗ್ಗ – ಬಿವೈ ರಾಘವೇಂದ್ರ – ಬಿಜೆಪಿ
ಹಾಸನ – ಪ್ರಜ್ವಲ್‌ ರೇವಣ್ಣ – ಜೆಡಿಎಸ್‌
ದಕ್ಷಿಣ ಕನ್ನಡ – ಬ್ರಿಜೇಶ್‌ ಚೌಟಾ – ಬಿಜೆಪಿ
ಉಡುಪಿ – ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ – ಬಿಜೆಪಿ
ಚಿತ್ರದುರ್ಗ – ಬಿಎನ್‌ ಚಂದ್ರಪ್ಪ – ಕಾಂಗ್ರೆಸ್‌
ತುಮಕೂರು – ಮುದ್ದಹನುಮೇಗೌಡ – ಕಾಂಗ್ರೆಸ್‌
ಮಂಡ್ಯ – ಎಚ್‌ಡಿ ಕುಮಾರಸ್ವಾಮಿ – ಜೆಡಿಎಸ್‌
ಮೈಸೂರು – ಯದುವೀರ್‌ ಒಡೆಯರ್‌ – ಬಿಜೆಪಿ
ಚಾಮರಾಜನಗರ – ಸುನೀಲ್‌ ಬೋಸ್‌ – ಕಾಂಗ್ರೆಸ್‌
ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್‌ – ಕಾಂಗ್ರೆಸ್‌
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ – ಬಿಜೆಪಿ
ಬೆಂಗಳೂರು ಸೆಂಟ್ರಲ್‌ – ಪಿಸಿ ಮೋಹನ್‌ – ಬಿಜೆಪಿ
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ – ಬಿಜೆಪಿ
ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್‌ – ಬಿಜೆಪಿ
ಕೋಲಾರ – ಮಲ್ಲೇಶ್‌ ಬಾಬು – ಜೆಡಿಎಸ್‌

Leave a Reply

Your email address will not be published. Required fields are marked *

error: Content is protected !!
× How can I help you?