ಬಿಜೆಪಿ ಪಕ್ಷದಿಂದ ಕೆಲವರು ಪಲಾಯನ ಸಂಭವ… ಈ ಬಾರಿ ಗದಗ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ?

ನಗರಸಭೆ ಎರಡನೆಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ.
ಬಿಜೆಪಿ ಪಕ್ಷದಿಂದ ಆರು ಅಭ್ಯರ್ಥಿಗಳ ಪಲಾಯನ
ಈ ಬಾರಿ ಗದಗ ನಗರ ಸಭೆ ಕಾಂಗ್ರೆಸ್ ತೆಕ್ಕೆಗೆ ಬಿಳಲಿದೆಯೇ ಎಂಬ ಪ್ರಶ್ನೆ ನಗರದ ತುಂಬಾ ಲೀಲಾಜಾಲವಾಗಿ ಓಡಾಡುತ್ತಿದೆ.
ನೂರಕ್ಕೆ ನೂರು ಪ್ರತಿಶತ ಕಾಂಗ್ರೆಸ್ ಗ್ಯಾರೆಂಟಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಕೇವಲ ಒಂದು ಸದಸ್ಯ ಬಲ ಅಂತಕದಲ್ಲಿ ಅಧಿಕಾರ ಪಡೆದುಕೊಂಡಿದ್ದ ಬಿಜೆಪಿ ಈಗ ಗದಗ ಬಟಗೇರಿ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೂ ಮುನ್ನ ಸಂಕಷ್ಟ ಎದುವಿಸಲಿದೆ

ವಿಧಾನಸಭಾ ಚುನಾವಣೆಯ ಬಿಸಿ ಗಾಳಿಯಲ್ಲಿ ಮುಳುಗಿದ್ದ ಗದಗ ವಿಧಾನಸಭಾ ಚುನಾವಣೆಗೂ ಮುಂಚೆ ನಡೆದ ನಗರಸಭೆ ಚುನಾವಣೆ ಕೇವಲ ಒಂದು ಸ್ಥಾನದ ಹಂತಗದಿಂದ ಬಿಜೆಪಿ ತೆಕ್ಕೆಗೆ ಬಿದ್ದಿತ್ತು.

ಬಿಜೆಪಿಯಲ್ಲಿ ಇದ್ದುಕೊಂಡು ಬಿಜೆಪಿಗೆ ಬಲೆ ಬೀಸುತ್ತಿದ್ದ ಬಿಜೆಪಿಯ ತಂಡದ ಐದು ಜನ ಸದಸ್ಯರು ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿರುವ ವಿಷಯ ಗದಗಿನ ಜನಕ್ಕೆ ತಿಳಿಯದೆ ಇರುವ ಸಂಗತಿಯಲ್ಲ. ಕಾಂಗ್ರೆಸ್ ಬೆಂಬಲಿತ ಐದು ಜನ ಬಿಜೆಪಿ ಸದಸ್ಯರ ತಂಡ ಈಗ ಎಂಟಕ್ಕೆ ತಲುಪಿದ್ದು ಮತ್ತೊಂದು ವಿಶೇಷ

ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯೊಂದಿಗೆ ಈ ಬಾರಿ ಬಿಜೆಪಿಯೋ ಕಾಂಗ್ರೆಸ್ಸು ಎಂಬುದನ್ನ ಗದುಗಿನ ಜನತೆ ಕಾದು ನೋಡಬೇಕಾಗಿದೆ

Leave a Reply

Your email address will not be published. Required fields are marked *

error: Content is protected !!
× How can I help you?