ಧಾರವಾಡ:-
ಕನ್ನಡದ ಅಧ್ಯಾಪಕರಾಗಿ ತಮ್ಮ ಅಧ್ಯಯನಶೀಲ ಬೋಧನೆಯಿಂದ ಅಸಂಖ್ಯಾತ ಶಿಷ್ಯ ಬಳಗವನ್ನು ಸಂಪಾದಿಸಿದ್ದರು.
ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದರು.
ಅನೇಕ ಸಂಘ-ಸಂಸ್ಥೆಗಳ ಜೊತೆಗೂಡಿ ಕನ್ನಡ ಭಾಷೆ ಕಟ್ಟುವಲ್ಲಿ
ಮತ್ತು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರು.
ತಮ್ಮ ಸರಳ ಮತ್ತು ಸಜ್ಜನಿಕೆಯ ಮೇರು ವ್ಯಕ್ತಿತ್ವದಿಂದ ಬದುಕು ಸಾಗಿಸಿದವರು. ಪುದುಚೇರಿಯ ಶ್ರೀ ಅರಭಿಂದೋ ಆಶ್ರಮದೊಂದಿಗೆ ಸದಾ ಒಡನಾಟ ಹೊಂದಿದ್ದ ಅವರು, ಆಧ್ಯಾತ್ಮಿಕದತ್ತ ಅಪಾರ ಒಲವು ಸಾಧಿಸಿದ್ದರು.
ಅನುಭಾವಿ ಡಾ.ಕಾಪಸೆಯವರ ಅಗಲಿಕೆಯಿಂದ ಕನ್ನಡ ಸಾಹಿತ್ಯಕ್ಕೆ ಅಪಾರ ನಷ್ಟವಾಗಿದೆ. ಹಿರಿಯ ವಿದ್ವಾಂಸರ ಅಗಲಿಕೆಯಿಂದ ಅವರ ಕುಟುಂಬದವರಿಗೆ, ಶಿಷ್ಯರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಡಾ.ಕಾಪಸೆ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ.
ಶ್ರೀ ಅರವಿಂದ ಬೆಲ್ಲದ
ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕರು.