ಗದಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಅಕ್ರಮ ಹಣ ಸಾಗಾಟಕ್ಕೆ ಕಡಿವಾಣ ಹಾಕಿದ್ದು, ಕೆ ಎಸ್ ಆರ‍್ ಟಿ ಸಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 5 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚೆಕ್ ಪೋಸ್ಟ್ ನಲ್ಲಿ ಸಾರಿಗೆ ಸಂಸ್ಥೆ ಬಸ್ ನಲ್ಲಿ ಐದು ಲಕ್ಷ ರೂಪಾಯಿ ಹಣ ಸಾಗಿಸುವಾಗ ಸೀಜ್ ಮಾಡಲಾಗಿದೆ. ಬಸ್ ನಲ್ಲಿ ಹಣ ತಗೆದುಕೊಂಡು ಸೈಯದಬ್ದುಲ್ ರಜಾಕ್ ಹೊರಟಿದ್ದ ವ್ಯಕ್ತಿಯಾಗಿದ್ದು, ಸೂಕ್ತ ದಾಖಲೆ ಇಲ್ಲದ ಕಾರಣ ಹಣ ಸೀಜ್ ಮಾಡಲಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ