👁️
ಒಬ್ಬ ಹುಡುಗ ಪ್ರತಿದಿನ 12 ಗಂಟೆಗಳ ಕಾಲ ಅಧ್ಯಯನ ಮಾಡಿದರೂ ಇತಿಹಾಸದಲ್ಲಿ ಅನುತ್ತೀರ್ಣನಾದ. ಮಗು ಹೇಗೆ ವಿಫಲವಾಯಿತು ಎಂದು ತಂದೆ ಅನುಮಾನಿಸಿದರು. ಆ ಕೂಡಲೇ ತಂದೆ ಶಾಲೆಗೆ ಹೋಗಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು :
ಪ್ರಶ್ನೆ : ಭಾರತ ಯಾವಾಗ ಸ್ವಾತಂತ್ರ್ಯ ಪಡೆಯಿತು?
ಉತ್ತರ : 2014.
ಪ್ರಶ್ನೆ : ಶ್ವೇತ ಕ್ರಾಂತಿ ಯಾವಾಗ ಪ್ರಾರಂಭವಾಯಿತು?
ಉತ್ತರ : 2014.
ಪ್ರಶ್ನೆ : ಹಸಿರು ಕ್ರಾಂತಿ ಯಾವಾಗ ಪ್ರಾರಂಭವಾಯಿತು?
ಉತ್ತರ : 2014ರಲ್ಲಿ.
ಪ್ರಶ್ನೆ : ಭಾರತದಲ್ಲಿ ವಿಮಾನ ಸೇವೆಗಳು ಯಾವಾಗ ಪ್ರಾರಂಭವಾದವು ?
ಉತ್ತರ : 2014ರಲ್ಲಿ.
ಪ್ರಶ್ನೆ : ಭಾರತದಲ್ಲಿ ರೈಲು ಸೇವೆಗಳು ಯಾವಾಗ ಪ್ರಾರಂಭವಾದವು?
ಉತ್ತರ : 2014ರಲ್ಲಿ.
ಪ್ರಶ್ನೆ : ಭಾರತದಲ್ಲಿ IIT, IIM, ISRO, AIIMS ಯಾವಾಗ ಪ್ರಾರಂಭವಾಯಿತು?
ಉತ್ತರ : 2014 ರಿಂದ.
ಪ್ರಶ್ನೆ : ಭಾರತದ ಸಶಸ್ತ್ರ ಪಡೆಗಳು, CRPF, CISF, ITBT ಯಂತಹ ಪಡೆಗಳನ್ನು ಯಾವಾಗ ರಚಿಸಲಾಯಿತು?
ಉತ್ತರ : 2014ರಲ್ಲಿ.
ಪ್ರಶ್ನೆ : ಭಾರತದಲ್ಲಿ ಕೈಗಾರಿಕಾ ಕ್ರಾಂತಿ ಯಾವಾಗ ನಡೆಯಿತು ?
ಉತ್ತರ : 2014 ರಿಂದ.
ಪ್ರಶ್ನೆ : ಭಾರತಕ್ಕೆ ಮೊದಲ ಕಂಪ್ಯೂಟರ್ ಯಾವಾಗ ಬಂದಿತು?
ಉತ್ತರ : 2014ರಲ್ಲಿ.
ಈ ಉತ್ತರ ಪತ್ರಿಕೆಯನ್ನು ನೋಡಿದ ತಂದೆ ಕೂಗಾಡುತ್ತಾ ಮನೆಗೆ ಬಂದು ಮಗನ ಕಪಾಳಕ್ಕೆರಡು ಬಿಗಿದು ಕಿರುಚಾಡಿ ಕೇಳಿದರು, ನೀನೇಕೆ ಹೀಗೆ ಅಸಂಬದ್ಧವಾಗಿ ಬರೆದೆ ?
▪️ಮಗ ಕಿರುಚಿ ಹೇಳಿದ, ಅಪ್ಪಾ.. ಇದು ನಿನ್ನಿಂದಾಗಿ.
▪️ಅದು ಹೇಗೆ ಎಂದು ತಂದೆ ಕೇಳಿದರು.
ಮಗನು ಉತ್ತರಿಸಿದ, ಅಪ್ಪಾ.. ಕಳೆದ 70 ವರ್ಷಗಳಲ್ಲಿ ಏನೇನೂ ಆಗಿಲ್ಲ ಎಂದು ನೀವು ಯಾವಾಗಲೂ ಹೇಳುತ್ತಲೇ ಇರುತ್ತೀರಿ. ಏನಾಗಿದೆಯೋ ಅದನ್ನು 2014ರ ನಂತರ ಪ್ರಧಾನಿಯಾದ ಮೇಲೆ ಮೋದಿಯವರೇ ಮಾಡಿದ್ದಾರೆ.
ನಾನು ಪುಸ್ತಕವನ್ನು ಓದಿದ್ದೇನೆ, ಆದರೆ ನಾನು ನಿಮ್ಮ ಮಾತನ್ನು ನಂಬಿದ್ದೇನೆ.
ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ನನಗೆ ಹೇಗೆ ತಿಳಿಯುವುದು?
😆 🤪