ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ Sowmya Reddy ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ವಿಜಯಕ್ಕೆ ನಾಯಕನಾದ ವಿನಾಯಕನ ದರ್ಶನ ಪಡೆದು ನಾಮಪತ್ರ ಸಲ್ಲಿಸುತ್ತಿದ್ದೇವೆ. ಇಡೀ ರಾಜ್ಯದಾದ್ಯಂತ ನಾನು ಹಾಗೂ ಮುಖ್ಯಮಂತ್ರಿಗಳು ಪ್ರವಾಸ ಮಾಡಿದ್ದೇವೆ. ಕರ್ನಾಟಕದಲ್ಲಿ ಖಂಡಿತ ಮೋದಿ ಅಲೆಯಾಗಲೀ, ಬಿಜೆಪಿ ಅಲೆಯಾಗಲೀ ಇಲ್ಲ. ಈಗ ಇರುವುದು ಗ್ಯಾರಂಟಿ ಅಲೆ ಮಾತ್ರ. ಹೆಣ್ಣನ್ನು ಶಕ್ತಿಸ್ವರೂಪಿಣಿ ಎನ್ನುತ್ತೇವೆ. ಈ ಬಾರಿ ಕರ್ನಾಟಕದಲ್ಲಿ 6 ಮಹಿಳೆಯರಿಗೆ ಲೋಕಸಭಾ ಟಿಕೆಟ್ ನೀಡುವ ಮೂಲಕ ಒಂದು ಇತಿಹಾಸ ಬರೆದಿದ್ದೇವೆ. ಸೌಮ್ಯ ರೆಡ್ಡಿ ಅವರನ್ನ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.