ಕಾಂಗ್ರೆಸ್‌ ಅಭ್ಯರ್ಥಿ ಅಸೂಟಿ ಪರ ಲಾಡ ಪ್ರಚಾರ

ಜಿಲ್ಲಾ ಕಾಂಗ್ರೆಸ್‌ ಸೇವಾದಳ ಜೊತೆ ಸಚಿವ ಲಾಡ್‌ ಸಭೆ

ಧಾರವಾಡ,:
ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪರವಾಗಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಧಾರವಾಡದ ಮಯೂರ್‌ ರೆಸಾರ್ಟ್ಸ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ಸೇವಾದಳದೊಂದಿಗೆ ಸಭೆ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ಗೆಲುವಿಗೆ ಕೈಗೊಳ್ಳಬಹುದಾದ ಕಾರ್ಯತಂತ್ರಗಳು, ಪ್ರಚಾರದ ರೀತಿ, ಮತದಾರರನ್ನು ತಲುಪುವ ವಿಧಾನಗಳ ಕುರಿತು ಸಚಿವರು ಚರ್ಚೆ ನಡೆಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ತರಲು, ಕಾಂಗ್ರೆಸ್‌ ಐತಿಹಾಸಿಕ ಗೆಲುವು ಸಾಧಿಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣ. ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಸಚಿವರು ಹೇಳಿದರು.

ಸಭೆ ವೇಳೆ ಅಭ್ಯರ್ಥಿ ವಿನೋದ್‌ ಅಸೂಟಿ, ಪಕ್ಷದ ಮುಖಂಡರಾದ ಅನಿಲ್ ಕುಮಾರ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಅಸೂಟಿ ಪರ ಲಾಡ ಪ್ರಚಾರ

Thank you for the vote!

Leave a Reply

Your email address will not be published. Required fields are marked *

error: Content is protected !!
× How can I help you?