
ಧಾರವಾಡ:– ಮಠಾಧಿಪತಿಗಳ ಸಭೆಯನ್ನ ಮಾಡಿ ನಾವು ನಮ್ಮ ನಿಲುವನ್ನ ಪ್ರಕಟ ಮಾಡಿದ್ದೆವೆ.ಇದು ಕೇಂದ್ರದವರೆಗೆ ಮಾಹಿತಿ ಹೋಗಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಧಾರವಾಡದಲ್ಲಿ ಇಂದು ಬೆಂಬಲಿಗರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ
ಅವರು, ನಾವು ಮೊದಲೇ ಹೋರಾಟ ಮಾಡಿಲ್ಲ ೫ ವರ್ಷದ ಮಗು ಇದ್ದಾಗ ನನ್ನ ಹೋರಾಟ ಆರಂಭ ಆಗಿದ್ದ ತಾಯಿಯ ಜೊತೆಗೆ, ಎರಡನೇ ಹೋರಾಟದ ಪರಿಣಾಮ ನಾನು ೧೦ ವರ್ಷದಲ್ಲೇ ಸನ್ಯಾಸಿ ಆಗಲು ಕಾರಣ ಆಗಿತ್ತು ಎಂದರು.
ನಾನು ಮನೆ ಬಿಟ್ಟಾಗ ೧೦ ವರ್ಷದವನಿದ್ದಾಗ. ಯಾವುದೃ ಸರ್ಕಾರವನ್ನು ಎತ್ತಿ ಹಿಡಿಯುವದು ಬಿಳಿಸುವದು ನನ್ನ ಉದ್ದೇಶ ಅಲ್ಲ, ಯಾರ ಹಿತಕ್ಕಾಗಿ ಕೂಡಾ ಅಲ್ಲಾಅದಕ್ಕೆ ಉದಾಹರಣೆ ೯೯ ಪಂಗಡ ಹೊಂದಿರುವ ಈ ಸಮಾಜಕ್ಕೆ ಅವತ್ತು ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದೆವು ಎಂದರು.
ಬಸವಣ್ಣನವರ ಕಲ್ಪನೆಯಂತೆ ಎಲ್ಲರೂ ಕೂಡಿ ಬಾಳ ಬೇಕು ಎಂದು ಹೋರಾಟ ಮಾಡಿದ್ದೆವು. ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸುವಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಟ ಮಾಡಿದ್ದೆವೆ
ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದ್ದೆನೆ, ಸಮಾಜದ ಪರ ಹೋರಾಟ ಮಾಡಿದ್ದೆನೆ
ದೇವರ ಸಾಕ್ಷಿಯಂತೆ ಹೋರಾಟ ಮಾಡಿದ್ದೆನೆ ಎಂದರು.
ಯಾವುದು ನ್ಯಾಯಾ, ಅನ್ಯಾಯ ಎಂದು ಗೊತ್ತಿದೆ.ಕೇಂದ್ರ ಸಚಿವರ ವಿಚಾರ ನಾನು ಎತ್ತಿಕೊಂಡಿದ್ದೆನೆ. ಮೂರುಸಾವಿರ ಮಠದಲ್ಲಿ ಸಭೆಯಲ್ಲಿ ನಾನು ರಾಜಕಾರಣಿಗಳು ತುಳಿದು ಬಾಳು ಮಾಡಬಾರದು ಎಂದು ಹೇಳಿದ್ದೆ
ಅದು ಆಗಬಾರದು ಎಂದು ಹುಟ್ಟಿದ್ದೇ ಪ್ರಜಾಸತ್ತಾತ್ಮಕ ವ್ಯವಸ್ಥೆ. ಕೆಲವು ವಿಚಾರ ಸಮಾಜದ ಮುಂದೆ ಇಡಲು ಹೋಗಿದ್ದೆನೆ ಎಂದರು.
ಚುನಾವಣೆ ನಂತರ ಗೆದ್ದ ಮೇಲೆ ಜಾತಿ ಮಾಡಿದರೆ ಅವರು ಜಾತಿವಾದಿಯಾಗಿ ಉಳಿತಾರೆ ಆದರಿಂದ ರಾಜ್ಯದ ಮಂತ್ರಿ, ಪ್ರಧಾನ ಮಂತ್ರಿ ದೇಶದ ಸಂವಿಧಾನ ಉಳಿಸುವ ಕೆಲಸ ಆಗಬೇಕು
ಸಾಮಾನ್ಯ ಜನರಿಗೆ ಇದರ ಅರಿವು ಇರಲ್ಲ, ಅದನ್ನ ಜನಪ್ರತಿನಿಧಿಗಳು ಮಾಡಬೇಕು ಎಂದರು.
ಧಾರವಾಡ ಭಕ್ತರ ಸಭೆಯಲ್ಲಿ ನಾನು ಒಂದು ನಿರ್ಧಾರ ಕೈಗೊಳ್ತೆನೆ ಎಂದಿದ್ದೆನೆ
ತಾವು ಹೂವಿನ ಹಾಸಿಗೆ ಹಾಸಿ ನನಗೆ ಸ್ವಾಗತ ಮಾಡಿದ್ದಿರಿ. ವೇದಿಕೆ ಮೇಲೆ ಮಾಲಾರ್ಪಣೆ ನಿಷೇಧ ಮಾಡ್ತೆನೆ. ಇವತ್ತು ವೇದಿಕೆಯಲ್ಲಿ ನಮ್ಮ ಹೋರಾಟ ಗೆಲುವಿನತ್ತ ಸಾಗಲಿ
ನಾವು ಹೋರಾಟದ ವಿಷಯ ಗುರಿಮುಟ್ಟುವವರೆಗೆ ಮಾಲಾರ್ಪಣೆ ಮಾಡಿಸಿಕೊಳ್ಳಲ್ಲ ಎಂದರು.
ಜನರಿಗೆ ಮಾಲಾರ್ಪಣೆ ಆಗಬೇಕು, ನಾವು ಯಾವುದೇ ಪಕ್ಷದ ಅಭಿಮಾನಿ ಅಲ್ಲಾ, ವಿರೋಧಿ ಕೂಡಾ ಅಲ್ಲ
ನಾನು ಮಠಕ್ಕೆ ಬಂದ ಮೇಲೆ ಯಾವುದೇ ಜಾತಿಗೆ ಅವಕಾಶ ಇಲ್ಲ, ಅದನ್ನ ತಲೆಯಲ್ಲಿ ಇಟ್ಟುಕೊಂಡಿಲ್ಲ ವ್ಯಕ್ತಿಯ ನಡೆ ವಿರುದ್ಧ ನಮ್ಮ ಹೋರಾಟ ಎಂದರು.
ಪ್ರಲ್ಹಾದ ಜೋಶಿ ಅವರನ್ನ ನಾವು ಕೂಡಾ ಪ್ರೀತಿ ಮಾಡಿದ್ದೆವೆ.ನಾಡಿನ ಜನ ಪ್ರೀತಿ ಮಾಡಿದ ಮೇಲೆ ಯಾವುದೇ ಸೂಚನೆಗೆ ಅವರು ಬೆಲೆ ಸಿಗಲಿಲ್ಲ. ಅದಕ್ಕೆ ಹೋರಾಟ ಮಾಡಿದ್ದು, ಧಾರವಾಡ ಜಿಲ್ಲೆಯಲ್ಲಿ ೨೦ ವರ್ಷದಿಂದ ಜೋಶಿ ಅವರನ್ನ ಗೆಲ್ಲಿಸಿದ್ದ ನಮಗೆ ಸೋಲಾಯಿತು ಎಂದರು.
ಪ್ರಧಾನಿ ಬಗ್ಗೆ ಗೌರವ ಇದೆ, ಆದರೆ ಪ್ರಧಾನಿ ಹೆಸರಿನಲ್ಲಿ ಗುಂಡಾಗಿರಿ ಖಂಡನಿಯ
ಇಂತ ಸಂಸದರನ್ನ ಹತ್ತಿಕಬೇಕು ಎಂದು ಒತ್ತಾಯ ಮಾಡ್ತೆನೆ ಎಂದರು.