ಕಾರಭಾರಿ ಮೋಷನ್ಸ್ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಎರಡು ಪ್ರತ್ಯೇಕ ಚಿತ್ರಗಳಿಗೆ ಹೊಸ ಪ್ರತಿಭೆಗಳ ಹುಡುಕಾಟ

ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 2013 ರಲ್ಲಿ ಹುಟ್ಟಿಕೊಂಡ ಕಾರಭಾರಿ ಮೋಷನ್ಸ್ ಚಿತ್ರ ನಿರ್ಮಾಣ ಸಂಸ್ಥೆ ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶಕ್ಕಾಗಿ ಪ್ರಯಾಸಪಡುತ್ತಿದೆ.
ಸಂಸ್ಥೆಯ ಸಂಸ್ಥಾಪಕ ರಾ ದೇ ಕಾರಭಾರಿ ಉತ್ತರ ಕರ್ನಾಟಕದ ಅವಕಾಶ ವಂಚಿತರಾಗಿ ಇಂಡಿಯನ್ ಮೀಡಿಯಾ ಅಕಾಡೆಮಿ ಆ್ಯಂಡ್ ಶಾರ್ಟ್ ಫಿಲ್ಮ್ ಸೊಸೈಟಿ ಅನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಕಲಾವಿದರಿಗೆ ಉಚಿತವಾಗಿ ಕಲಾವಿದರ ಗುರುತಿನ ಕಾರ್ಡ್ ಪೂರೈಸುವ ಯೋಜನೆ ಹಮ್ಮಿಕೊಂಡಿದೆ…


ಕಲಾವಿದರಿಗೆ ಕೇವಲ ಕಾರ್ಡ್ ನೀಡುವುದಕ್ಕಾಗಿ ಕನಿಷ್ಠ 25ಸಾವಿರ ರೂಪಾಯಿ ಚಾರ್ಜ್ ಮಾಡುವ ಕೆಲವು ಸಮೂಹಗಳ ಲೂಟಿ ಹೊಡೆಯುವುದನ್ನು ಮನಗಂಡು ಇಲ್ಲಿ ಕಲಾವಿದರಾಗಿ ಒಂದು ನೂತನ ಸಂಸ್ಥೆ ಹುಟ್ಟಿಕೊಂಡಿತು.
ಉತ್ತರ ಕರ್ನಾಟಕದ ಕಲಾವಿದರು, ಪತ್ರಕರ್ತರು ಇವರನ್ನು ಮುಖ್ಯ ವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಸಮೂಹ ಕಾರ್ಯ ಮಾಡುತ್ತಿದೆ.

ಎರಡು ಚಿತ್ರಗಳಿಗೆ ಚಿಂತನೆ
ಪ್ರಪಂಚದ ಚಿತ್ರ ಜಗತ್ತಿನ ಚಿತ್ರ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ಸ್ಥಾಪಿಸಲು ಕಾರಭಾರಿ ಮೋಷನ್ಸ್ ಚಿತ್ರ ನಿರ್ಮಾಣ ಸಂಸ್ಥೆ, ಇಂಡಿಯನ್ ಮೀಡಿಯಾ ಅಕಾಡೆಮಿ ಆ್ಯಂಡ್ ಶಾರ್ಟ್ ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ಈಗ ಎರಡು ಪ್ರತ್ಯೇಕ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.

ನಾಯಕ ನಾಯಕಿಯರಿಗೆ ನಮ್ಮಲ್ಲಿ ಬರವಿಲ್ಲ
ಉತ್ತರ ಕರ್ನಾಟಕದ ಮಣ್ಣಲ್ಲಿ ಕಲೆ ತುಂಬಿದೆ ನಮ್ಮ ಚಿತ್ರಕ್ಕೆ ಕಲೆ ತುಂಬಿದ ನಾಡಿನ ಮಣ್ಣಿನ ಮಕ್ಕಳು ಸಾಕು ಯಾವ ದೊಣ್ಣೆ ನಾಯಕನೂ ಬೇಡ.
ಹೊಸ ಮುಖಗಳನ್ನು ಹಾಕಿಕೊಂಡು ಚಿತ್ರ ಮಾಡುತ್ತೇನೆ ಎಂದು ಖಡಕ್ಕಾಗಿ
ಚಿತ್ರದ ಹೀರೋ ಯಾರು? ಹೀರೋಯಿನ್ ಹೇಗಿದ್ದಾಳೆ? ಎಂದು ಕೇಳುವ ನಿರ್ಮಾಮಕರಿಗೆ ರಾ ದೇ ಉತ್ತರಿಸಿದರೆ. ಕೋಟಿ ಕೊಟ್ಟರೆ ಮಾತ್ರ ಡೇಟ್ ಕೊಡುತ್ತೇನೆ ಎಂದು ಹೇಳುವ ಪ್ರಸಿದ್ಧ ನಟರಿಗೆ ಅಷ್ಟೇ ಖಡಕ್ಕಾಗಿ ಉತ್ತರ ಕರ್ನಾಟಕದ ಮಣ್ಣಲ್ಲಿ ನಿಮಗಿಂತ ಅದ್ಭುತ ನಟರಿದ್ದಾರೆ ಅವರಿಗೆ ಅವಕಾಶ ಸಿಕ್ಕಿಲ್ಲ ಅಷ್ಟೇ…. ಒಬ್ಬ ನಿರ್ದೇಶ ಮನಸ್ಸು ಮಾಡಿದರೆ ಸಾವಿರ ನಾಯಕರು ಹುಟ್ಟುತ್ತಾರೆ ಎಂದು ಉತ್ತರಿಸಿದ್ದಾರೆ.

ಆತ್ಮೀಯ ಗೆಳೆಯರೇ.
ನಾನು ರಾ ದೇ ಕಾರಾಭಾರಿ
1998 ರಿಂದ ಚಿತ್ರ ಕನಸು ಕಂಡು ಸೋತು ಹೋದವನು
ಅವಕಾಶಗಳನ್ನು ಹುಡುಕಿ ಸುಸ್ತಾದವನು
ಒಂದು ಚಿತ್ರವನ್ನು ನಿರ್ಮಿಸಲು ಹೋಗಿ ಎಲ್ಲವನ್ನೂ ಕಳೆದುಕೊಂಡನು.
ಆದರೂ ಸೋಲನ್ನು ಒಪ್ಪಿಕೊಳ್ಳದೆ ಅದನ್ನು ಮೆಟ್ಟಿಲು ಮಾಡಿಕೊಂಡು ಮೇಲೆ ಹತ್ತಲು ಹವಣಿಸುವಾತನು

ಕಾರಾಭಾರಿ ಮೋಶನ್ಸ್ ಮೂವಿ ಮೇಕರ್ಸ್
ಲಾಂಛನದಲ್ಲಿ ಈಗ ಮತ್ತೊಮ್ಮೆ ಚಿತ್ರ ನಿರ್ಮಾಣಕ್ಕೆ ಸಿದ್ದವಾಗಿದ್ದೇನೆ.

ಬದಲಾದ ಚಿತ್ರ ವೀಕ್ಷಣೆ ಪ್ರಪಂಚಕ್ಕೆ ಹೊಂದಿಕೆಯಾಗುವ, ಅತ್ಯಂತ ಕಡಿಮೆ ಬಂಡವಾಳದಿಂದ, ಕಿರುತೆರೆಯ ಮೇಲೆ ಬೆಳ್ಳಿತೆರೆಯ ಕನಸನ್ನು ಸಾಕಾರಗೊಳಿಸುವ ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಅತ್ಯವಶ್ಯಕ.

ಅವಕಾಶ ಹುಡುಕಬೇಡಿ ; ಅವಕಾಶ ಹುಟ್ಟುಹಾಕಿ
ಎಂಬುದು ನನ್ನ ನೂತನ ತತ್ವ.

ಪ್ರಸಕ್ತ ಕೈಯಲ್ಲಿರುವ ನಾಲ್ಕು ಚಿತ್ರ ಕಥೆಗಳಿಗೆ ಬಣ್ಣ ಹಚ್ಚುವ ಪ್ರಯತ್ನ ನನ್ನದು.

ಚಿತ್ರಕ್ಕೆ
ಎಲ್ಲಾ ವಯಸ್ಸಿನ ಪುರುಷ ಮಹಿಳಾ ಕಲಾವಿದರು ಬೇಕಾಗಿದ್ದಾರೆ.

ಬನ್ನಿ ಜೊತೆಯಾಗಿ ಕಪ್ಪು ಕನಸಿಗೆ ಬಣ್ಣದ ಲೇಪನ ಹಚ್ಚೋಣ.

7760433113 Call Us

ರೂಪವತಿ

ಚಿತ್ರೀಕರಣಕ್ಕಾಗಿ ಕಥೆ 1
ರೂಪವತಿ
ಒಟ್ಟು ನಾಲ್ಕು ಕಥೆಗಳು ಚಿತ್ರೀಕರಣಕ್ಕಾಗಿ ಸಿದ್ದವಿರುತ್ತದೆ

📹 ರೂಪವತಿ

ಕೌಟುಂಬಿಕ ಕಲಹವೊಂದರ
ಸತ್ಯ ಘಟನೆ ಆಧಾರಿತ ಚಿತ್ರಕಥೆ

ಪ್ರತಿಯೊಬ್ಬನ ಜೀವನದಲ್ಲಿ ತನ್ನದೇ ಕನಸಿನ ರೂಪವತಿ
ರೂಪವತಿಗಾಗಿ ಕಥಾನಾಯಕನ ಮಿಡಿತ ಕಥಾನಾಯಕನ ಸುತ್ತ ರೂಪವತಿಯ ಮಧುರ ಪ್ರೇಮ.

ಇದೊಂದು ವಿಚಿತ್ರ ಪ್ರೇಮ ಕಥೆ

ಪಾತ್ರಗಳು
ಬಾಲ್ಯದ ದಿನಗಳು ನಾಯಕ 1
ಬಾಲ್ಯದ ದಿನಗಳು ನಾಯಕಿ 1
ಯೌವ್ವನದ ದಿನಗಳು ನಾಯಕ 1
ಯೌವ್ವನದ ದಿನಗಳು ನಾಯಕ 2

ಇತರೆ ಪ್ರಮುಖ ಪಾತ್ರಗಳು ಒಟ್ಟು 20
ಎಲ್ಲಾ ವಯಸ್ಸಿನ ಪುರುಷ ಮಹಿಳಾ ಪಾತ್ರಗಳು

ಇತರೆ ಪೋಷಕ ಪಾತ್ರಗಳು ಸಹ ಲಭ್ಯ (ಪುರುಷ ಮತ್ತು ಮಹಿಳೆ)

ಆಡಿಷನ್ : ದಿನಾಂಕ ನಿಗದಿಯಾಗಿಲ್ಲ

ಚಿತ್ರೀಕರಣ ಸ್ಥಳ :
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ

ವಿಸ್ತೀರ್ಣ 2.5 ಘಂಟೆ
ಕಿರುತೆರೆಯ ಚಲನಚಿತ್ರ

ನಿರ್ಮಾಪಕ ರಹಿತವಾಗಿ ಪ್ರಾಯೋಜಕತ್ವದಲ್ಲಿ ನಿರ್ಮಿಸುತ್ತಿರುವ ಚಿತ್ರ

ಇತರೆ,
ಆಡಿಷನ್ ನಲ್ಲಿ ಪ್ರಸ್ತುತ

ಲಾಂಛನ
ಇಂಡಿಯನ್ ಮೀಡಿಯಾ ಅಕಾಡೆಮಿ ಆ್ಯಂಡ್ ಶಾರ್ಟ್ ಫಿಲ್ಮ್ ಸೊಸೈಟಿ (ರಿ)

ದೇವಸೂಳೆ

ದೇವಸೂಳೆ
ಚಿತ್ರದ ಟೈಟಲ್ ದೇವಕನ್ಯೆ ಎಂದು ಬದಲಾಯಿಸಲಾಗಿತ್ತು ಆದರೆ ಚಿತ್ರದ ನೈಜ ಅರ್ಥ ಹಾಗೂ ಚಿತ್ರದ ಗೆಲುವಿನ ಪಯಣದ ದೂರದೃಷ್ಟಿಯ ಕಾರಣ ದೇವಸೂಳೆ ಎಂದೇ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು

ಕಾಮುಕ ಸಮಾಜದ ಅಟ್ಟಹಾಸಕ್ಕೆ ನಲುಗಿದ ಮುಗ್ದ ಬಾಲಕಿಯರ ಕರುಣೆಯ ಕಥೆ.

ಸಮಾಜದ ಕಾಮುಖ ಕಣ್ಣಿಗೆ ಬಲಿಯಾದ ಮುಗ್ದ ಹಸುಳೆಗಳ ಕರುಣಾಜನಕ ಕಥೆ

ದೇವರ ಹೆಸರಿನಲ್ಲಿ ಬಡ ಹುಡುಗಿಯರ ಜೊತೆ ಚಲ್ಲಾಟವಾಡುವ ನೀಚ ಸಮಾಜದ ನೈಜ ಕೃತ್ಯದ ಅನಾವರಣವೆ ದೇವಸೂಳೆ

ಇದೊಂದು ಕೌಟುಂಬಿಕ ಚಿತ್ರ ಚಿತ್ರದಲ್ಲಿ ಯಾವುದೇ ಆಶ್ಲೀಲಗಳಿಲ್ಲ ಬದಲಾಗಿ ಆಶ್ಲೀಲ ಸಮಾಜವನ್ನು ಅನಾವರಣ ಮಾಡುವ ಪ್ರಯತ್ನ ಅಷ್ಟೇ.

ಪಾತ್ರಗಳು

ನಾಯಕ 1
ನಾಯಕಿ 3
ಬಾಲ್ಯ ಪಾತ್ರದಲ್ಲಿ ನಾಯಕಿ 3

ಇತರೆ ಪ್ರಮುಖ ಪಾತ್ರಗಳು 10

ಇತರೆ ಪೋಷಕ ಪಾತ್ರಗಳು 20

ನಿರ್ಮಾಪಕ ರಹಿತವಾಗಿ ಪ್ರಾಯೋಜಕತ್ವದಲ್ಲಿ ನಿರ್ಮಿಸುತ್ತಿರುವ ಚಿತ್ರ

ಇತರೆ
ಆಡಿಷನ್ ನಲ್ಲಿ ಪ್ರಸ್ತುತ

ಲಾಂಛನ
ಇಂಡಿಯನ್ ಮೀಡಿಯಾ ಅಕಾಡೆಮಿ ಆ್ಯಂಡ್ ಶಾರ್ಟ್ ಫಿಲ್ಮ್ ಸೊಸೈಟಿ

Leave a Reply

Your email address will not be published. Required fields are marked *

error: Content is protected !!
× How can I help you?