ಗದಗ ಜಿಲ್ಲಾ ರೋಣ ತಾಲೂಕ ಹೊಳೆಆಲೂರ ಗ್ರಾಮದಲ್ಲಿ ನಡೆದ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ರಂಜಾನ್ ದಿನದಂದು ಹೊಳೆಆಲೂರಿನ ಜಾಮಿಯಾ ಮಜೀದ್ ನಿಂದ ಮೆರವಣಿಗೆ ಮೂಲಕ ಇದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ್ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಮಯದಲ್ಲಿ ಮಾತನಾಡಿದ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಲತೀಫ್ ಇನಾಮಿ ರವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಅಲ್ಲಾಹನ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಿದರು.ಹಾಗೂ ನಿರಂತರ ರೋಜಾ ಆಚರಣೆ ಮಾಡಿದ್ದ ಶಾಲಾ ವಿದ್ಯಾರ್ಥಿಗಳು ಹಾಗೂ ರೋಜಾ ಕೈಗೊಂಡಿರುವ ಚಿಕ್ಕ ಮಕ್ಕಳಿಗೆ ಅಲ್ಲಾಹನ ಹೆಸರಿನಲ್ಲಿ ಸನ್ಮಾನ ಮಾಡಲಾಯಿತು. ಈ ಸಮಯದಲ್ಲಿ ಅಂಜುಮನ್ ಅಧ್ಯಕ್ಷರಾದ ಫಕ್ರುಸಾಬ್ ಚಿಕ್ಕಮಣ್ಣೂರ. ಚಾಂದಸಾಬ ಮುಲ್ಲಾ. ನಜೀರಸಾಬ್ ನದಾಫ ಗೌಸುಸಾಬ ಹಳ್ಳಿಕೆರೆ. ಮೊಹಮ್ಮದಸಾಬ ಶಿರಟ್ಟಿ. ಕಾನಸಾಬ್ ಕೊತಬಾಳ. ಆದಮಸಾಬ್ ಮುನ್ನಾಪುರ್. ಇಬ್ರಾಹಿಂ ನದಾಫ್ ಬಾಬು ಮೆಣಸಗಿ. ಮೈನುದ್ದೀನ ನದಾಫ ಇನ್ನೂ ಅನೇಕ ಉಪಸ್ಥಿತರಿದ್ದರು.