ಮಿಸ್ ಇಂಡಿಯಾ ವಿಜೇತೆ, ಚಿಕ್ಕಮಗಳೂರು ಮೂಲದ ನಟಿ ಪೂಜಾ ರಮೇಶ್ (Pooja Ramesh) ಬಿಜೆಪಿ (BJP) ಸೇರಿಕೊಂಡಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದ್ದಾರೆ.
ಸದ್ಯ ಪೂಜಾ ರಮೇಶ್ ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ರಾಜಕೀಯ ಅಂಗಳಕ್ಕೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಾಯಚೂರು ಕ್ಷೇತ್ರದಿಂದ ಎಎಪಿನಿಂದ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತು ಅನುಭವ ಪಡೆದುಕೊಂಡಿದ್ದರು. ಸದ್ಯ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗ್ಯಾಪ್‌ದಲ್ಲಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.