
ಮಾಜಿ ಮಂತ್ರಿಯಾಗಿದ್ದ ದಿ. ಡಿ.ಟಿ.ಜಯಕುಮಾರ್ ಆಪ್ತ ಸಹಾಯಕನಾಗಿದ್ದ ಶಿಕ್ಷಕನೋರ್ವನ ರಾಸಲೀಲೆಯ ಫೋಟೋಗಳು ಸದ್ಯ ಸೋಷಿಯಲ್ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಸೂರಿನ ರಾಂಪುರ ಗ್ರಾಮದ ಸರಕಾರಿ ಶಾಲಾ ಶಿಕ್ಷಕನಾಗಿದ್ದ ಈತನ ಕಾಮದಾಟ ಬಯಲಾಗಿದ್ದು, ತಾನೇ ನೀತಿ ಪಾಠ ಹೇಳಿಕೊಟ್ಟ ವಿದ್ಯಾರ್ಥಿನಿಯನ್ನು ತನ್ನ ಕಾಮದಾಸೆಗೆ ಬಳಸಿಕೊಂಡಿದ್ದಾನೆ. ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತನೇ 20 ವರ್ಷದ ತನ್ನ ಹಳೇ ವಿದ್ಯಾರ್ಥಿನಿಯೊಂದಿಗೆ ಈ ಕೃತ್ಯ ಎಸಗಿದ್ದು, ಫೋಟೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ಸಿದ್ದರಾಜು ನಾಪತ್ತೆಯಾಗಿದ್ದಾನೆ
