ಹಿಂದು ಮುಸ್ಲಿಂ ಎಂಬ ಜ್ವಾಲಾಮುಖಿ

“” ಸಿ.ಎಸ್. ಪಾಟೀಲ “”
ಸೆಲ್ ೬೩೬೩೪೭೨೪೫೮

ಚುನಾವಣೆ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳು ಮಾಡುವ ತಂತ್ರಗಾರಿಕೆಯನ್ನು ನೋಡಿದಾಗ ದೇಶದ ವಿಭಜನೆಗೆ ಕಾರಣ ವಾಗಬಹುದೆ??
ಈ ದೇಶ ತನ್ನೊಡಲೊಳಗೆ ಸದಾ ಒಂದು ಜ್ವಾಲಾಮುಖಿ ಯನ್ನು ಅದು ಯಾವಾಗ ಸಿಡಿದು ಅಗ್ನಿಪರ್ವತ ವಾಗಿ ರೂಪಾಂತರ ವಾಗಿ ಎಲ್ಲಾ ಕಡೆಗಳಲ್ಲಿ ಚಲ್ಲಾಡುತದೆ ಎಂಬ ಆತಂಕ ಮನದ ಮೂಲೆಯಲ್ಲಿ ಸದಾಕಾಡುತ್ತಲೆ ಇದೇ ಆ ಜ್ವಾಲಾಮುಖಿಯ ಹೆಸರು ಹಿಂದು ಮುಸ್ಲಿಂ
ಹೌದು ಈ ದೇಶ ಬೇಕಾದ ರು.ಕೋಮುದಳ್ಲುರಿಗೆ ಬಲಿಯಾಗಬಗುದು ಅಥವಾ ದೇಶದ ವಿಭಜನೆಯ ಕೂಗು ಹೆಚ್ಚಾಗಬಹುದು ಏಕೆಂದರೆ ಈ ವಿಷಯ ತಂತಿಯ ಮೇಲಿನ ನಡಿಗೆ ಯಿದ್ದಂತೆ .ಇಲ್ಲಿಯವರೆಗೆ ಹೇಗೊ ಸಮಾಧಾನಕರ ವಾಗಿ ಸಣ್ಣ ಪುಟ್ಟ ಘಟನೆ ಗಳಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ ಈ ಚುನಾವಣೆ ಯಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಹೆಚ್ಚು ಮುನ್ನಲೆಗೆ ತರುತ್ತಿರುವಂತೆ ಭಾಸವಾಗುತ್ತದೆ ಈ ಸಂದರ್ಭದಲ್ಲಿ ಅವರಿಗೆ ಚುನಾವಣೆ ಎನ್ನುವ ತಂತ್ರಗಾರಿಕೆ ಮತ್ತು ಮತಗಳ ಕ್ರೂಡಿಕರಣದ ಅವಶ್ಯಕತೆ ಕಾಣಿಸಿರಬಹುದು ಹಾಗೆಯೇ ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್‌ ನಾಯಕರು ಸಹಾ ಚುನಾವಣೆ ಗೆಲ್ಲಲು ಇನ್ನೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಾ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಪ್ರಯತ್ನ ಮಾಡಲು ಹೊರಟರು ಅಂತಿಮವಾಗಿ ಚುನಾವಣೆ ಯಲ್ಲಿ ಯಾರೊಬ್ಬರೂ ಗೆಲ್ಲಬಹುದು ಆದರೆ ಮಾಡಿಟ್ಟುಹೊದ ಅನಾಹುತ ಗಳು ಧೀರ್ಘ ಉಳಿಯಬಹುದು ಅಥವಾ ಅಪಾಯಕಾರಿ ಯಾಗಿ ಈ ದೇಶದಲ್ಲಿ ಕೋಮು ಗಲಭೆಗಳು ನಡೆಯಬಹುದು ಇಲ್ಲವೇ
ದೇಶದ ವಿಭಜನೆಯ ಕೂಗು ಜೋರಾಗಬಹುದು ಎಕೆಂದರೆ ‌ ಈಗಿನ ಸಾಮಾಜಿಕ ಸಮೂಹ ಸಂಪರ್ಕ. ಜಾಲಗಳು ಕೇವಲ ಕೆಲವೇ .ಸ್ಥಳಗಳಿಗೆ ಸೀಮಿತ ವಾಗಿಲ್ಲ ‍ ಅದು ಇಡೀ ದೇಶದ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣ ದಲ್ಲಿ ನಿರಂತರವಾಗಿ ಚರ್ಚೆಯ ವಿಷಯ ವಾಗಿರುತ್ತದೆ ಮೊದಲಿನಂತೆ ಕೇವಲ ಕೆಲವೇ ಕೆಲವು ಸಂಬಂಧ ಪಟ್ಟ ವರು ಮಾತ್ರ ಚರ್ಚಿಸುದಿಲ್ಲ ಇಡೀ ದೇಶದ ಬಹುತೇಕ ಜನರು ತಮ್ಮ ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸುತ್ತಾರೆ ಇದು ಸಹಜವಾಗಿ ಜನರ ಮನಸ್ಸಿನಲ್ಲಿ ಆಳವಾಗಿ ಇಳಿದು ದ್ವೇಷ ಅಸೂಯೆ ಗಳು ಮತ್ತಷ್ಟು ಕಿಚ್ಚು ಹೆಚ್ಚಿಸುತ್ತದೆ
ನಮ್ಮ ದೇಶ ನಡೆಯುವ ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪರ್ಯಾಸವೆಂದರೆ ಕೇವಲ ರಾಜಕೀಯ ಮತ್ತು ರಾಜಕಾರಣಿ ಗಳಿಂದ ಮಾತ್ರ ಎಂಬ ಭೃಮೆ ಮತ್ತು ತಪ್ಪು ಕಲ್ಪನೆ ಯಾಗಿದೆ ರಾಜಕೀಯ ಅದರಲ್ಲಿ ಒಂದು ಅಂಶ ಮಾತ್ರ ಅದನ್ನು ಹೊರತುಪಡಿಸಿ ಸಾಮಾನ್ಯ ಜನರು ದೇಶದ ವನ್ನು ತಮಗರಿವಿಲ್ಲದೆ ಅಧಿಕಾರ ವಿಲ್ಲದೆ ದೇಶವನ್ನು ಮುನ್ನೆಡೆಸುತ್ತಿದ್ದಾರೆ
ಆದರೆ ಮುಖ್ಯವಾಗಿ ಚರ್ಚೆಗಳಾಗುವದು ರಾಜಕಾರಣಿಗಳ ಭಾಷಣದ ತುಣುಕುಗಳು ಮಾತ್ರ. ಚುನಾವಣೆ ಗಳನ್ನು ಹೊರತುಪಡಿಸಿ ಭಾರತೀಯ ಸಂವಿಧಾನ ಮತ್ತು ಮೌಲ್ಯಗಳ ದೃಷ್ಟಿಯಿಂದ ಮಾತನಾಡುವ ದಾದರೆ
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತೀರೆಕದ ಭಾಷಣಗಳಿಗೆ ಮೀಸಲಾಗಿರುವಂತೆ ಬಳಸಲಾಗುತ್ತದೆ.ಪ್ರಥಮ ದಲ್ಲಿ ದೇಶದ ಅಭಿವೃದ್ಧಿ ಪರ ಮಾತ್ರ ಮಾತನಾಡುತ್ತಿದ್ದರು ಆದರೆ ಈಗಿನಅವರ ಭಾಷಣದಲ್ಲಿ ಹಿಂದು ಮುಸ್ಲಿಂ ಬಗ್ಗೆ ಹೆಚ್ಚು ಮಾತನಾಡಲು ತೊಡಗಿದ್ದಾರೆ ಎರಡು ಕಡೆಯ ಮೂಲಭೂತವಾದಿಗಳಿಗೆ ಇದು ಪ್ರಚೋದನಾತ್ಮಕ ವಾಗಿರುತ್ತದೆ ಹಾಗೇಯೆ ಕೆಲವು ಕಾಂಗ್ರೆಸ್ ನಾಯಕರು ಅದಕ್ಕೆ ಉಗ್ರ ವಾಗಿ ಪ್ರತಿಕ್ರಿಯೆಸಿ ಕೊನೆಗೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದುಎಂಬುದರ ಬಗ್ಗೆ ಯೋಚಿಸಬೇಕಾಗಿದೆ
ಒಬ್ಬ ಪ್ರಬುದ್ಧ ನಾಗರಿಕ ರಾಗಿ ನಿಜವಾಗಿಯೂ ಯೋಚಿಸಬೇಕಾಗಿರುವದು ಭಾರತದ. ಸಂವಿಧಾನ ಮತ್ತು ಸಮಗ್ರತೆಯ ಹಿತಾಸಕ್ತಿಯ ದೃಷ್ಟಿಯಿಂದಲೇ ಹೊರತು ಯಾವುದೇ ಜಾತಿ ಧರ್ಮ ಮತ್ತು ಪಕ್ಷದ ಸಂಕುಚಿತ ಮನೋಭಾವ ದಿಂದಲ್ಲ ಒಂದು ವೇಳೆ ನಾವು ಧರ್ಮ ಪಕ್ಷ ಅಥವಾ ವ್ಯಕ್ತಿಯ.ಸುತ್ತಲೆ ಯೋಚಿಸಿದರೆ ಸಮಾನ ಚಿತ್ರಣ ಸಿಗುವುದಿಲ್ಲ ಜೊತೆಗೆ ಈ ಅಭಿಪ್ರಾಯ ದೇಶದ ವಿಭಜಕ ಶಕ್ತಿಗಳಿಗೆ ಪ್ರೊತ್ಸಾಹ ನೀಡಿ ಹಿಂಸೆಯ ರೂಪ ತಾಳಿ ದೇಶ ವಿಭಜನೆಯ ದಾರಿ ಹಿಡಿಯಬಹುದು
ಹಿಂದು ಮುಸ್ಲಿಂ ಎಂಬ ವಿಷಯ ತುಂಬಾ ಸಂಕೀರ್ಣ ಮತ್ತು ಅಪಾಯಕಾರಿ ಯಾಗಿ ಪರಿವರ್ತನೆ ಯಾಗಿದೆ
ಮಾನವ ಧರ್ಮ ಮನುಷ್ಯತ್ವದ ಆಧಾರದ ಮೇಲೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಂಡ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು ಯಾವನೊ ರಾಜಕಾರಣಿ ಯ ಅಧಿಕಾರ ದ ತೆವಲಿಗೆ
ಈ ದೇಶ ಮತ್ತು ಪ್ರಜಾಪ್ರಭುತ್ವ. ಸಮಾಜ ನಾಶವಾಗಬಾರದು ದಯವಿಟ್ಟು ಅತಿರೇಕದ ವರ್ತನೆಯನ್ನುನಿಲ್ಲಿಸಿ
ಮಾತಿನ ಬರದಲ್ಲಿ ಸಂವಿಧಾನದ ಮೂಲ ಆಶಯಗಳಿಗೆ ಕೊಡಲಿಪೆಟ್ಟು ಬಿಳದಿರಲಿ
,””ಜೈ ಹಿಂದ””

Leave a Reply

Your email address will not be published. Required fields are marked *

error: Content is protected !!
× How can I help you?