ಗದಗ RTO ಆಂಧ್ರ ವಾಹನ ಸಿಜ್ ಮಾದ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟ.

ಗದಗ RTO ಆಂಧ್ರ ಮೂಲದ ಪ್ರವಾಸಿಗರ ಬಸ್ ಒಂದನ್ನು ಸಿಜ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ. ಕನಿಷ್ಠ 45 ಪ್ರಯಾಣಿಕರು ರಾತ್ರಿ RTO ಪ್ರಾಂಗಣದಲ್ಲಿ ಲಾಕ್ ಆಗಿ ಅಲ್ಲಿಯೇ ರಾತ್ರಿ ಕಳೆದಿರುವ ಬಗ್ಗೆ ಗದಗ ಮಾದ್ಯಮಗಳು ವರದಿ ಮಾಡಿದ್ದು ಇದರ ನೈಜ ಸಂಗತಿಗಳು ಮರೆಮಾಚಿ ಸುದ್ದಿ ಮಾಡಲಾಗಿದೆ.


ಮದ್ಯಾಹ್ನ 12:20 ರ ಸುಮಾರಿಗೆ ಗದಗ RTO ಅಧಿಕಾರಿಗಳು ಬಸ್ ಹಿಡಿದುಕೊಂಡು ರಾತ್ರಿಯಾದರೂ ಬಸ್ ಸೀಜ್ ಮಾಡಿದ ಕುರಿತು ಬಸ್ ಚಾಲಕರಿಗೆ ಯಾವುದೇ ನೋಟೀಸು ನೀಡದೆ ಗದಗ RTO ಕಛೇರಿಯಲ್ಲಿಯೇ ಬಿಟ್ಟು ಹೋಗಿದ್ದರು. ಬಸ್ ಸೀಜ್ ಮಾಡಿದ ಬಗ್ಗೆಯಾಗಲೀ ಬಸ್ RTO ರವರ ಅಧೀನದಲ್ಲಿ ಪಡೆದ ಬಗ್ಗೆಯಾಗಲೀ ಅಥವಾ ಕೋರ್ಟ್ ಗೆ ಹಾಜರಾಗುವ ಬಗ್ಗೆಯಾಗಲೀ RTO ಅಧಿಕಾರಿಗಳು ಬಸ್ ಚಾಲಕರಿಗೆ ಯಾವುದೇ ನೋಟೀಸು ಇತ್ಯಾದಿ ನೀಡಿರಲಿಲ್ಲ ಹಾಗೂ ನಕಲಿ ಬಸ್ ಹಾಗೂ ತಪ್ಪಿತಸ್ಥ ಚಾಲಕನನ್ನು ದಸ್ತಗಿರಿ ಮಾಡಿರುವ ಬಗ್ಗೆ ಯಾವುದೇ ದಾಖಲಾತಿಗಳನ್ನು ಸಲ್ಲಿದಿರಲಿಲ್ಲ.
ಅಂದು ರಾತ್ರಿ ಬಸ್ ಮಾಲೀಕರಿಗೆ ಆಂಧ್ರ ಪ್ರದೇಶದ ವ್ಯಕ್ತಿಗಳಿಂದ ನಮ್ಮ ದೂರವಾಣಿ ಸಂಖ್ಯೆ ಪಡೆದು ನಮಗೆ ಕರೆ ಮಾಡಿ ಕನಿಷ್ಠ12 ಮಕ್ಕಳು 20 ಮಹಿಳೆಯರ ಸಹಿತವಾಗಿ ಕನಿಷ್ಠ 50 ಜನ ಇಲ್ಲಿ ನಿರ್ಜನ ಪ್ರದೇಶದಲ್ಲಿ ಇರುವ ಬಗ್ಗೆ ಹಾಗೂ ಇಂತಹ ಕತ್ತಲೆ ಪ್ರದೇಶದಲ್ಲಿ ಮಕ್ಕಳು ಭಯದಲ್ಲಿ ಇರುವ ಬಗ್ಗೆ ತಮ್ಮ ನೋವನ್ನು ತೋಡಿಕೊಂಡ ನಂತರ ನಾವು ಮಕ್ಕಳ ಸಹಾಯವಾಣಿ ಹಾಗೂ ಗ್ರಾಮೀಣ ಪೊಲೀಸ್ ಇಲಾಖೆಯ ಸಹಾಯದಿಂದ ಮಕ್ಕಳು ಮಹಿಳೆಯರ ಸಹಿತವಾಗಿ ಎಲ್ಲರನ್ನೂ ಗದಗ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಯಿತು.
ಸದರಿ ವಾಹನದ ದಾಖಲಾತಿಗಳು ತಪ್ಪು ಆಗಿದ್ದಲ್ಲಿ ನಾವು ಗಾಡಿ ಬಿಟ್ಟು ಹೋಗಲು ಅಥವಾ ಯಾವುದೇ ಶಿಕ್ಷೆ ಪಡೆಯಲು ಸಿದ್ದ ಎಂದು ಹಾಗೂ ಕಲಿಷ್ಯ ಒಂದೂವರೆ ತಿಂಗಳ ಹಿಂದಷ್ಟೇ ನಾವು ಹಳೆಯ ಬಸ್ ಖರೀದಿ ಮಾಡಿದ್ದೇವೆ ಇಂಜಿನ್ ಸೀಜ್ ಆಗಿರುವ ಕಾರಣ ಅದನ್ನು ಬದಲಾಯಿಸಿದ್ದೇವೆ ಹಾಗೂ ಈ ಬಗ್ಗೆ ಬಳ್ಳಾರಿ RTO ರವರ ಸಲಹೆ ಪಡೆದಿದ್ದೆವು ಎಂದೂ ಹಾಗೂ ಬಳ್ಳಾರಿ RTO ರವರೂ ಸಹ ಈ ಬಗ್ಗೆ ಗದಗ RTO ಅಧಿಕಾರಿಗಳಿಗೆ ಪೋನ್ ನಲ್ಲಿ ಹೇಳಿದ್ದಾರೆ ಎಂದು ಸಹ ಗದಗ ನಲ್ಲಿ ಸಿಲುಕಿಕೊಂಡ ಬಸ್ ಮಾಲಿಕ ನಮ್ಮ ಬಳಿ ಹೇಳಿದರು.
ಮಕ್ಕಳಿಗೆ ಮತ್ತು ಮಹಿಳೆಯರಿಗೆ ಈ ರಾತ್ರಿಯ ವೇಳೆಯಲ್ಲಿ ಆಶ್ರಯ ನೀಡಿ ಎಂದು ಅವರು ನಮ್ಮ ಬಳಿ ಬೇಡಿಕೊಂಡರು.
ಗದಗ ಮಕ್ಕಳ ಸಹಾಯವಾಣಿಯ ಜಿಲ್ಲೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅವರಿಗೆ ಆಶ್ರಯ ಕಲ್ಪಿಸಿದ್ದರು.
ಸದರಿ ಸೂದ್ಧಿಯು ನಿರ್ಜನ ಪ್ರದೇಶದಲ್ಲಿ ಮಕ್ಕಳನ್ನು ಮಹಿಳೆಯರನ್ನು ಭಾಷೆ ತಿಳಿಯದ ಊರಿನಲ್ಲಿ ಹೀಗೆ ಅಧಿಕಾರಿಗಳು ಬಿಟ್ಟು ಹೋಗಿದ್ದು ತಪ್ಪು ಎಂಬುದು. ಮಕ್ಕಳು ಹಾಗೂ ಮಹಿಳೆಯರಿಗಾದರೂ ಕನಿಷ್ಠ ಪಕ್ಷ ಆಶ್ರಯ ನೀಡಬಹುದಿತ್ತು ಆದರೆ ಅಧಿಕಾರಿಗಳು ಇದರ ಗೋಜಿಗೆ ಹೋಗಿರಲಿಲ್ಲ
.ರಾತ್ರಿ ಸ್ಥಳಕ್ಕೆ ನಾವು ತೆರಳಿ ನಮ್ಮ ಸಾಮಾಜಿಕ ಮಾದ್ಯಮದಲ್ಲಿ ಸದರಿ ವಿಷಯವನ್ನು ಪ್ರಸ್ತಾಪ ಮಾಡಿ ಲೈವ್ ಮಾದೆದ್ದೆವು ಮರುದಿನ ಸಾಕಷ್ಟು ಮಾದ್ಯಮಗಳು RTO ಕಚೇರಿಗೆ ತೆರಳಿ ಸುದ್ದಿ ಮಾಡಿದವು ಆದರೆ ಸದರಿ ಸುದ್ದಿಯಲ್ಲಿ ಐಡಿ ರಾತ್ರಿ ಸಂಕಷ್ಟ ಎದುರಿಸಿದ ಮಕ್ಕಳ ವಿಷಯದ ಪ್ರಸ್ತಾಪವೇ ಇಲ್ಲ ಮಕ್ಕಳಿಗೆ ಸಹಕರಿಸಿ ಅವರಿಗೆ ಆಶ್ರಯ ನೀಡಿದ ಮಕ್ಕಳ ಶಾಯವಾಣಿ ಇವರ ಪ್ರಸ್ತಾಪವೇ ಇಲ್ಲ RTO ಅಧಿಕಾರಿಗಳು ಹೇಳಿದ ಕಥೆಯನ್ನು ಯಥಾವತ್ತಾಗಿ ಬರೆದು ಸುದ್ದಿ ಪ್ರಕಟಿಸಲಾಗಿದೆ.
ಮಕ್ಕಳ ಹಕ್ಕು ರಕ್ಷಣೆ ಅಥವಾ ಅಪ್ರಾಪ್ತ ಮಕ್ಕಳ ಕಾಳಜಿಯ ಬಗ್ಗೆ RTO ಅವರಿಗಂತೂ ಕಾಳಜಿ ಇಲ್ಲ ಮಾಧ್ಯಮಗಳಿಗೂ ಇಲ್ಲವಾ

ಮಕ್ಕಳ ಸಹಾಯವಾಣಿ ಇವರು ಮಕ್ಕಳನ್ನು ರಕ್ಷಿಸಿದ ಕುರಿತು ದೂರುದಾರರಿಗೆ ಸಲ್ಲಿಸಿದ ವರದಿ

ಮಾಡ್ತಾಮಗಳು ಪ್ರಕಟಿಸಿದ ಸುಳ್ಳು ಸುದ್ದಿಗಳು

Leave a Reply

Your email address will not be published. Required fields are marked *

error: Content is protected !!
× How can I help you?