PRP ACT ಮೈಸೂರು ವಿಭಾಗೀಯ ರಾಜ್ಯ ಅಧ್ಯಕ್ಷ ಅಕ್ಮಲ್ ಪಾಷಾ ರವರ ಮೇಲೆ ಹಲ್ಲೆ, ಗ್ರಾಮ ಪಂಚಾಯತ್ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಮಲ್ಲಿಪಟ್ಟಣ ಹೋಬಳಿ ಹೊಳಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗೆ ಸಂಬಂಧಪಟ್ಟ ನಮ್ಮ ಹೊಲ ನಮ್ಮ ದಾರಿ ಕ್ರಿಯಾಯೋಜನೆ ಅಡಿಯಲ್ಲಿ ನೈಜವಾಗಿ ಕಾಮಗಾರಿ ಮಾಡಬೇಕಾಗಿದ್ದ ರಸ್ತೆಯನ್ನು ಬಿಟ್ಟು ವೈಯಕ್ತಿಕವಾಗಿ ಒಂದು ವ್ಯಕ್ತಿಯ ಹೆಸರಿನಲ್ಲಿ ಇರುವ ಶ್ರೀ ಅಯೂಬ್ ಖಾನ್ ರವರ ಜಮೀನಿನಲ್ಲಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ರಸ್ತೆಗೆ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡು ಅದಿಕಾರಿಗಳ ಶಾಮೀಲಿನೊಂದಿಗೆ ಸದರಿ ಯೋಜನೆಯ ಮೊದಲ ಕಂತಿನ ಹಣವನ್ನೂ ಸಹ ಮಂಜೂರು

ಮಾಡಿಕೊಂಡಿರುತ್ತಾರೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಲ್ಲಿ ಮೈಸೂರು ವಿಭಾಗೀಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಶ್ರೀ ಅಕ್ಮಲ್ ಪಾಶ ಎಂಬುವರು ಗ್ರಾಮಸ್ಥರ ಮನವಿ ಮೇರೆಗೆ ಪ್ರಶ್ನೆ ಮಾಡಲು ಹೋದಾಗ ಪಂಚಾಯಿತಿಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಮಧ್ಯೆ ಸ್ಥಳೀಯವಾಗಿ ಅಲ್ಲಿಯ ನಾಗರೀಕರಾದ ಶ್ರೀ ಅಬ್ದುಲ್ ಹಕ್ ಎಂಬುವರು ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯಿತಿ ವತಿಯಿಂದ ಸಾರ್ವಜನಿಕ ತನಿಕಾಧಿಕಾರಿಯವರು ಬಂದಾಗ ದೂರು ನೀಡಿ ತನಿಖೆಗೆ ಒತ್ತಾಯಿಸಿರುತ್ತಾರೆ. ತನಿಖೆ ನಡೆಯುವ ಸ್ಥಳದಲ್ಲಿ ಸಂಘಟನೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಶ್ರೀ ಅಕ್ಮಲ್ ಪಾಷಾ ರವರ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ತನಿಕೆಗೆ ಸಂಬಂಧಪಟ್ಟ ಸಾರ್ವಜನಿಕ ತನಿಕಾಧಿಕಾರಿಯವರಿಗೆ ಉದ್ದೇಶಿಸಿ ಇಲ್ಲಾಗಿರುವ ಹಗರಣವನ್ನು ಭೇದಿಸಿ ತಪ್ಪಿತಸ್ಥರ ಮೇಲೆ ಕ್ರಮವನ್ನು ತೆಗೆದುಕೊಂಡು ನೈಜವಾಗಿ ಕ್ರಿಯಾ ಯೋಜನೆಯನ್ನು ಎಲ್ಲಿ ಮಾಡಬೇಕು ಅಲ್ಲಿ ಮಾಡುವಂತೆ ಮತ್ತೆ ಕಾಮಗಾರಿಯ ಕ್ರಿಯಾಯೋಜನೆಗೆ ಪುನರ್ ಚಾಲನೆಯನ್ನು ನೀಡಬೇಕು ಎಂದು ಒತ್ತಾಯಿಸಿದಾಗ ಅದಿಕಾರಿಗಳು ವರದಿಯನ್ನು ಸಂಗ್ರಹಿಸಿ ನ್ಯಾಯ ದೊರಕಿಸಿ ಕೊಡುವ ಆಶ್ವಾಸನೆ ನೀಡಿ ಹೋಗಿರುತ್ತಾರೆ. ನಂತರ ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮೈಸೂರು ವಿಭಾಗೀಯ ಅಧ್ಯಕ್ಷರಾಗಿರುವ ಶ್ರೀ ಅಕಮಲ್ ಪಾಷಾ ಎಂಬುವರು ಈ ಕ್ರಿಯಾ ಯೋಜನೆಗೆ ಸಂಬಂಧಪಟ್ಟಂತೆ ಹಾಸನ ಜಿಲ್ಲಾ ಪಂಚಾಯಿತಿ ವತಿಯಿಂದ ಸಾರ್ವಜನಿಕ ತನಿಕಾಧಿಕಾರಿಯವರು ಬಂದು ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ತೆಗೆದುಕೊಂಡು ಒಂದು ತಿಂಗಳಾದರೂ ಸಹ ಆ ಕಾಮಗಾರಿಗೆ ಸಂಬಂಧಪಟ್ಟಂತೆ ಯಾವುದೇ ಒಂದು ಸೂಚನೆ ಅಥವಾ ಮಾರ್ಗಸೂಚಿ ಕಂಡು ಬರದೆ ಇದ್ದಂತಹ ಸಂದರ್ಭದಲ್ಲಿ ಲಿಖಿತವಾಗಿ ಹೊಳಲುಗೋಡು ಗ್ರಾಮ ಪಂಚಾಯಿತಿಗೆ ಹಾಸನ ಜಿಲ್ಲಾ ಪಂಚಾಯಿತಿ ವತಿಯಿಂದ ಸಾರ್ವಜನಿಕ ತನಿಕಾಧಿಕಾರಿಯವರು ವರದಿ ಪಡೆದು ತದನಂತರ ಆ ಕ್ರಿಯಾ ಯೋಜನೆಗೆ ಸಂಬಂದಿಸಿ ಗ್ರಾಮ ಪಂಚಾಯಿತಿ ಸಿಬ್ಬಂಧಿ ವರ್ಗದವರಿಗೆ ಆದೇಶಿಸಿರುವ ನಕಲು ಪ್ರತಿಯನ್ನು ಕಳುಹಿಸಿಕೊಡಿ ಎಂದು ಕೇಳಿದಾಗ ಅದಿಕಾರಿಗಳು ಸಮಯದ ಗಡುವನ್ನು ತೆಗೆದುಕೊಂಡು ನೀಡುತ್ತೇವೆಂದು ಮೀನಾಮೇಷ ತೋರಿರುತ್ತಾರೆ. ಈ ಮಧ್ಯೆ ಅರಕಲಗೂಡು ತಾಲೂಕು ಪಟ್ಟಣದ ಕೇಂದ್ರ ಭಾಗದಲ್ಲಿರುವ ಅನಕೃ ವೃತ್ತದ ಬಳಿ ಅಕ್ಮಲ್ ಪಾಶ ಎಂಬುವರು ಮೊಬೈಲ್ ಅಂಗಡಿಯ ಬಳಿ ನಿಂತುಕೊಂಡಾಗ ಖಾಸಗಿಯಾಗಿ ಅವರ ಜಮೀನಿನಲ್ಲಿ ಕಾಮಗಾರಿ ದುರ್ಬಳಕೆ ಮಾಡಿಕೊಂಡಂತಹ ವ್ಯಕ್ತಿ ಅಯೂಬ್ ಖಾನ್ ಎಂಬವರು ನೀನು ಅದನ್ನು ಕೇಳಲು ನಿನಗೆ ಅಧಿಕಾರ ಏನಿದೆ ನೀನು ಯಾವ ಊರಿನ ದೊಣ್ಣೆ ನಾಯಕ ನಾನು ಅವತ್ತು ಇರುತ್ತಿದ್ದರೆ ನಿಮ್ಮನ್ನು ಬಡಿದು ಕಳಿಸುತ್ತಿದ್ದೆ ಎಂದು ದೌರ್ಜನ್ಯ ದಬ್ಬಾಳಿಕೆಯನ್ನು ನಡೆಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಲ್ಲದೆ ಅಕ್ಮಲ್ ಪಾಶ ಎಂಬುವರ ಸಾರ್ವಜನಿಕ ಬದುಕಿನಲ್ಲಿ ಧಕ್ಕೆಯನ್ನು ತಂದಿದ್ದಲ್ಲದೆ ಅವರ ಸ್ವಾಭಿಮಾನಕ್ಕೆ ಚ್ಯುತಿಯನ್ನು ತರುವುದರ ಮೂಲಕ ದೈಹಿಕವಾಗಿ ಹಲ್ಲೆ ನಡೆಸಿರುತ್ತಾರೆ. ಸಾರ್ವಜನಿಕರ ಪರವಾಗಿ ನ್ಯಾಯ ಕೇಳಲು ಹೋದ ಸಂಘಟನೆಯ ಅಧ್ಯಕ್ಷರ ಮೇಲೆ ಈ ರೀತಿಯಾಗಿ ದೈಹಿಕವಾಗಿ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಲ್ಲದೆ ಜೀವ ಬೆದರಿಕೆಯನ್ನು ಒಡ್ಡಿರುವ ಅಯೂಬ್ ಖಾನ್ ರವರ ಮೇಲೆ ಕಾನೂನು ಸುವ್ಯವಸ್ಥೆ ಮತ್ತು ತಾಲೂಕು ಆಡಳಿತ ಗಮನಹರಿಸಿ ತಪ್ಪಿತಸ್ಥರ ಮೇಲೆ ಕ್ರಮವನ್ನು ತೆಗೆದುಕೊಂಡು ಮಾನಹಾನಿಗೆ ಒಳಪಟ್ಟಿರುವ ಸಂಘಟನೆಯ ಅಧ್ಯಕ್ಷರಾಗಿರುವ ಶ್ರೀ ಅಕ್ಮಲ್ ಪಾಶ ಅವರಿಗೆ ಮನಸ್ಥೈರ್ಯ ಮತ್ತು ಆತ್ಮ ಬಲವನ್ನು ತುಂಬುವುದರ ಮೂಲಕ ಅವರಿಗೆ ನ್ಯಾಯವನ್ನು ದೊರಕಿಸಿ ಮತ್ತು ಅವರ ಜೀವ ರಕ್ಷಣೆಗೆ ಭದ್ರತೆಯನ್ನು ಕೊಡಬೇಕಾಗಿ ಮನವಿ ಮಾಡಿಕೊಂಡಿರುವ ನಾಗರೀಕ ಸಮಾಜ ತಲೆ ತಗ್ಗಿಸುವ ದುರ್ಘಟನೆ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!
× How can I help you?