ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಯಾರ ತೆಕ್ಕೆಗೆ

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ…* ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿ….


ಬಹಳಷ್ಟು ಕುತೂಹಲ ಕೆರಸಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಬಗೆಗೆ ಸರ್ಕಾರ ಸೋಮವಾರ ದಿನಾಂಕ 5-8-2024ರಂದು ಗದಗ ಬೆಟಗೇರಿ ನಗರಸಭೆ ಸೇರಿದಂತೆ ರಾಜ್ಯದ 61 ನಗರ, ಪುರಸಭೆ,ಪಟ್ಟಣ ಪಂಚಾಯತ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದ್ದು ಈಗಾಗಲೇ ಮೊದಲನೆ 30 ತಿಂಗಳ ಅವಧಿ ಮುಗಿದಿದ್ದು. ಎರಡನೆಯ 3೦ ತಿಂಗಳ ಅವಧಿಗೆ ಮೀಸಲಾತಿ ಬಂದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ(G) ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ(GW)ಗೆ ಮೀಸಲಾಗಿದೆ. ಗದಗ ಬೆಟಗೇರಿ ನಗರಸಭೆಯ ಬಿಜೆಪಿ ಆಡಳಿತದಲ್ಲಿದೆ. ನಗರಸಭೆಯ 35 ಸದಸ್ಯರ ಪೈಕಿ 18 ಸದಸ್ಯರು ಬಿಜೆಪಿಯವರಾಗಿದ್ದಾರೆ. ಬಿಜೆಪಿಯ 18 ಸದಸ್ಯರಲ್ಲಿ 9 ಮಹಿಳಾ ಸದಸ್ಯರು, 9 ಪುರುಷ ಸದಸ್ಯರಿದ್ದಾರೆ. ಈ 18 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಬಹುದಾದರು ಈಗಾಗಲೆ ಮೊದಲನೆ ಅವಧಿಯ 30 ತಿಂಗಳು ಮಹಿಳಾ ಆದ್ಯಕ್ಷತೆಯಲ್ಲಿ ಆಡಳಿತ ನಡೆದಿದ್ದರಿಂದ ಬಹುತೇಕ 9 ಪುರುಷ ಸದಸ್ಯರಲ್ಲಿ ತೀವ್ರ ಪೈಪೋಟಿ ನಡೆಯಬಹುದು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 9 ಮಹಿಳೆಯರು ಪೈಪೋಟಿ ನಡೆಸಬಹುದು. ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ ಕಾ್ಉ ನೋಡಬೇಕು.

Leave a Reply

Your email address will not be published. Required fields are marked *

error: Content is protected !!
× How can I help you?